Chikkaballapur | ತಿರಂಗಾ ಯಾತ್ರೆಗೆ ಬಂದವರಿಗೆ ಫ್ರೀ ಪೆಟ್ರೋಲ್ ?
ಚಿಕ್ಕಬಳ್ಳಾಪುರ : ತಿರಂಗಾ ಯಾತ್ರೆಗೆ ಬಂದ ಬೈಕ್ ಸವಾರರಿಗೆ ಫ್ರೀ ಪೆಟ್ರೋಲ್ ಹಾಗೂ ಫ್ರೀ ಹೆಲ್ಮೆಟ್ ಕೊಡ್ತೀವಿ ಅಂತ ಬಿಜೆಪಿ ಮುಖಂಡ ಆಫರ್ ಕೊಟ್ಟಿದ್ದು, ಫ್ರೀ ಪೆಟ್ರೋಲ್ ಹಾಕ್ತಿಲ್ಲ ಅಂತ ಬಂಕ್‌ನಲ್ಲಿ ಬೈಕ್ ಸವಾರರು ಗಲಾಟೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ನಡೆದಿದೆ.
ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ಬಾಗೇಪಲ್ಲಿ ಪಟ್ಟಣದಲ್ಲಿ ತಿರಂಗಾ ಬೈಕ್ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಮುಂದಿನ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಆಕಾಂಕ್ಷಿ ಸಿ ಮುನಿರಾಜು ಅವರು ಆಯೋಜನೆ ಮಾಡಿದ್ದರು.

ಈ ವೇಳೆ ಬಿಜೆಪಿ ಮುಖಂಡರು ಫ್ರೀ ಪೆಟ್ರೋಲ್ ಆಫರ್ ನೀಡಿದ್ದರಂತೆ. ಆದ್ರೆ ಬಾಗೇಪಲ್ಲಿ-ಬೆಂಗಳೂರು ಹೈವೇಯಲ್ಲಿರುವ ಗಂಗೋತ್ರಿ ಪೆಟ್ರೋಲಿಯಂ ಬಂಕ್‌ಗೆ ಸಾವಿರಾರು ಜನ ಮುತ್ತಿಗೆ ಹಾಕಿ ಫ್ರೀ ಪೆಟ್ರೋಲ್ ಕೊಡ್ತೀರಾ ಇಲ್ವಾ ಅಂತ ಗಲಾಟೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.