Chikkaballapur : ಅಧಿಕಾರ ವ್ಯಾಪ್ತಿ ಮೀರಿ ಚೇಳೂರು ತಾಲ್ಲೂಕು ಕಚೇರಿ ಉದ್ಘಾಟಿಸಿದ ಸಚಿವ ಡಾ ಕೆ ಸುಧಾಕರ್ !
ಚಿಕ್ಕಬಳ್ಳಾಪುರ : ಅವರು ಜಿಲ್ಲಾ ಉಸ್ತುವಾರಿ ಸಚಿವರೂ ಅಲ್ಲ ಕಂದಾಯ ಸಚಿವರೂ ಅಲ್ಲ ಆದರೂ ತನ್ನ ಅಧಿಕಾರ ವ್ಯಾಪ್ತಿ ಮೀರಿ ಸ್ಥಳೀಯ ಶಾಸಕರನ್ನೂ ಕಡೆಗಣಿಸಿ ನೂತನ ತಾಲ್ಲೂಕಿನ ಕಂದಾಯ ಕಚೇರಿಯನ್ನು ಉದ್ಘಾಟಿಸಿದ ವಿಲಕ್ಷಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ಗ್ರಾಮದಲ್ಲಿ ನಡೆದಿದೆ.
ಹೌದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊಸ ತಾಲ್ಲೂಕು ಚೇಳೂರು ತಾಲ್ಲೂಕು ಕಚೇರಿಯನ್ನು ಆರೋಗ್ಯ ಸಚಿವ ಡಾ ಕೆ ಸುಧಾಕರ್ ತನ್ನ ಅಧಿಕಾರ ವ್ಯಾಪ್ತಿ ಮೀರಿ ದುರ್ವರ್ತನೆ ತೋರಿದ ಘಟನೆ ನಡೆದಿದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಯನ್ನು ಕಡೆಗಣಿಸಿದ್ದಲ್ಲದೆ ಅವರು ಇಲ್ಲದ ವೇಳೆ ತಾಲ್ಲೂಕು ಕಚೇರಿಯನ್ನು ಇಂದು ಉದ್ಘಾಟಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಜಿಲ್ಲಾಧಿಕಾರಿ ಎನ್ ಎಂ ನಾಗರಾಜ್ . ಎಸ್ಪಿ ನಾಗೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳು ಬಾಗಿಯಾಗಿದ್ದರು ಅಷ್ಟೇ ಅಲ್ಲದೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೋನಪ್ಪರೆಡ್ಡಿ ಯನ್ನು ಜೊತೆಯಲ್ಲಿಟ್ಟುಕೊಂಡು ವೇದಿಕೆ ಕಾರ್ಯಕ್ರಮ ಮಾಡಿದ್ದಾರೆ.
ವಾಸ್ತವವಾಗಿ ಪ್ರೋಟೋಕಾಲ್ ಪ್ರಕಾರ ಸ್ಥಳೀಯ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಉದ್ಘಾಟನೆ ನೆರವೇರಬೇಕು. ಆದರೆ ತಾಲ್ಲೂಕು ಸಮಿತಿ ಅಧ್ಯಕರು ಹಾಗೂ ಶಾಸಕರ ಗೈರಿನ ನಡುವೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಉದ್ದಟತನ ಮೆರೆದು ತಾಲ್ಲೂಕು ಕಚೇರಿಯನ್ನು ಉದ್ಘಾಸಿರೋದಕ್ಕೆ ಬಾಗೇಪಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ. ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿದ ಜಿಲ್ಲಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Chikkaballapur : Minister Dr K Sudhakar inaugurated the Chelur taluk office beyond the jurisdiction!