4 ತಿಂಗಳ ಮಗು ತಾನಾಗಿಯೇ ಪ್ರತಿಭಟನೆಗೆ ತೆರಳಿತ್ತೇ? ಹೀಗೆಂದು ಸುಪ್ರೀಂ ಕೋರ್ಟ್ ಶಹೀನಾಬಾಘ್ ನಲ್ಲಿ ಸಿಎಎ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಶಿಶುವೊಂದು ಸಾವಿಗೀಡಾದ ವರದಿಗೆ ಪ್ರತಿಕ್ರಿಯಿಸಿದೆ.
ಪೌರತ್ವ ಕಾಯ್ದೆ ವಿರೋಧಿಸಿ ಶಹೀನಾಬಾಘ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಪೋಷಕರು ಪ್ರತಿನಿತ್ಯ ತಮ್ಮ ನಾಲ್ಕು ತಿಂಗಳ ಮಗುವನ್ನು ಕರೆದುಕೊಂಡು ಹೋಗಿದ್ದರು. ತೀವ್ರ ಚಳಿಯಿಂದ ಅನಾರೋಗ್ಯಕ್ಕೆ ಒಳಗಾದ ಮಗು ಮೃತಪಟ್ಟಿತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗಳಲ್ಲಿ ಮಕ್ಕಳು ಭಾಗಿಯಾಗದಂತೆ ನಿಷೇಧ ಹೇರಬೇಕೆಂದು ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತ ಬಾಲಕಿ ಝೆನ್ ಗುಣರತನ್ ಸದಾವರ್ತೆ, ಸಿಜೆಐ ಎಸ್.ಎ.ಬೋಬ್ಡೆ ಅವರಿಗೆ ಪತ್ರ ಬರೆದಿದ್ದಳು.
ಸೋಮವಾರ ಸ್ವಯಂಪ್ರೇರಿತವಾಗಿ ಈ ವರದಿಯನ್ನು ಎತ್ತಿಕೊಂಡು ವಿಚಾರಣೆ ನಡೆಸಿದ ನ್ಯಾಯಪೀಠ, ನಾಲ್ಕು ತಿಂಗಳುಗಳ ಮಗು ಪ್ರತಿಭಟನೆಗೆ ತಾನಾಗಿಯೇ ತೆರಳಿದೆಯೇ? ಎಂದು ಆಕ್ರೋಶಭರಿತವಾಗಿ ಪ್ರಶ್ನಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಶಹೀನಾಬಾಘ್ ಮಹಿಳೆಯರ ಪರ ವಕೀಲರು, ಮಕ್ಕಳ ಪ್ರತಿಭಟನೆಯ ಹಕ್ಕನ್ನು ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಭಾರತವೇ ಬೆಂಬಲಿಸಿದೆ. ಹೆತ್ತವರು ಮಕ್ಕಳನ್ನು ಜಾತ್ರೆ, ಉತ್ಸವಗಳಿಗೆಂದು ಕರೆದುಕೊಂಡು ಹೋದಾಗ ಅಲ್ಲಿಯೂ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುವುದಿಲ್ಲವೇ? ಅದೇ ರೀತಿ ಪ್ರತಿಭಟನೆಯಲ್ಲಿ ನಡೆದಿದೆ ಎಂದು ಸಮರ್ಥಿಸಿದರು.
ಆಗ ನ್ಯಾಯಪೀಠ ಜನರು ಪ್ರತಿಭಟಿಸಲು ಅರ್ಹರಾಗಿದ್ದಾರೆ, ಯಾರ ಧ್ವನಿಯನ್ನು ನಾವು ಹತ್ತಿಕ್ಕುತ್ತಿಲ್ಲ. ಆದರೆ ಪ್ರತಿಭಟನೆಯಿಂದ ಶಿಶುವೊಂದು ಪ್ರಾಣತೆತ್ತಿದೆ. ತಾಯ್ತನವನ್ನು ನಾವು ಗೌರವಿಸುತ್ತೇವೆ ಹಾಗೂ ಮಕ್ಕಳ ಮೇಲೆ ಅತ್ಯಧಿಕ ಕಾಳಜಿ ನಮಗಿದೆ. ಆದರಿಂದ ತಾಯಂದಿರು ಇನ್ನಷ್ಟು ಸಮಸ್ಯೆ ಸೃಷ್ಟಿಸುವ ಬದಲು, ಪ್ರತಿಭಟನೆಯಿಂದ ಹಿಂದಕ್ಕೆ ಸರಿಯುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಮಾಧ್ಯಮ ಲೋಕಕ್ಕೆ ಡೊನಾಲ್ಡ್ ಟ್ರಂಪ್ ಬಿಗ್ ಶಾಕ್: ಸಿಎನ್ಎನ್ ದರ್ಪಕ್ಕೆ ಸೆಡ್ಡು ಹೊಡೆದು ಟ್ರಂಪ್ ಟೀವಿ ಆರಂಭಿಸಿದ ಅಮೆರಿಕ ಅಧ್ಯಕ್ಷ
ವಾಷಿಂಗ್ಟನ್: ಅಮೆರಿಕದ ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ತಮ್ಮ ವಿರುದ್ಧ ನಿರಂತರವಾಗಿ ಅಪಪ್ರಚಾರ ನಡೆಸುತ್ತಿರುವ...








