ಆಸ್ಪತ್ರೆಯಲ್ಲಿ ಮಗು ಕದ್ದು ತಲೆಮರೆಸಿಕೊಂಡಿದ್ದ ಖತರ್ನಾಕ್ ವೈದ್ಯೆ 1 ವರ್ಷದ ಬಳಿಕ ಅರೆಸ್ಟ್
ಬೆಂಗಳೂರು: ಮನೋವೈದ್ಯೆಯೊಬ್ಬಳು ಚಾಮರಾಜಪೇಟೆ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಿಂದ ಮಗು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದಳು… ಬರೋಬ್ಬರಿ 1 ವರ್ಷ ಆದ ಬಳಿಕ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಬರೋಬ್ಬರಿ ಒಂದು ವರ್ಷದ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ರೇಷ್ಮಾ ಮಗು ಕದ್ದಿದ್ದ ವೈದ್ಯೇಯಾಗಿದ್ದಾಳೆ.
ಕಳೆದ ವರ್ಷ ಮೇ 29, 2020ರಲ್ಲಿ ಮಗು ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗಿದ್ದ ವೈದ್ಯೆ 2021 ಮೇ 29 ರಂದೇ ಪೊಲೀಸರ ಬಲೆಗೆ ಸಿಕ್ಕಿಬಿದ್ದಿರೋದು ವಿಶೇಷ. ಘಟನೆ ಬಳಿಕ ಆರೋಪಿಯನ್ನ ಎಲ್ಲಿ ಹುಡುಕಿದರೂ ಮಾಹಿತಿ ಸಿಗುತ್ತಿರಲಿಲ್ಲ. ಪೊಲೀಸರು ಆರು ತಿಂಗಳ ಬಳಿಕ ಆರೋಪಿಯ ರೇಖಾ ಚಿತ್ರವನ್ನ ಬಿಡುಗಡೆ ಮಾಡಿ ಹುಡುಕಿದರೂ ಪತ್ತೆಯಾಗಿರಲಿಲ್ಲ.
ಕಳೆದ 3-4 ದಿನದಿಂದ ಆರೋಪಿ ಟವರ್ ಲೊಕೇಷನ್ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿದೆ. ಟವರ್ ಲೊಕೇಷನ್ ಆಧಾರದ ಮೇಲೆ ಆರೋಪಿ ರೇಷ್ಮಾಳನ್ನ ತಲಘಟ್ಟಪುರ ಪಿಎಸ್ ಐ ಶ್ರೀನಿವಾಸ್ ಅಂಡ್ ಟೀಂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ರೇಷ್ಮಾ ದಂಪತಿ ಒಬ್ಬರಿಗೆ ಮಗು ಮಾಡಿಕೊಡೊದಾಗಿ 15 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದಳು. ದಂಪತಿಯ ಮೊದಲ ಮಗು ಬುದ್ದಿ ಮಾಂದ್ಯತೆಯಿಂದ ಕೂಡಿತ್ತು. ಆ ಮಗುವಿಗೆ ಆರೋಪಿ ಡಾಕ್ಟರ್ ರೇಷ್ಮಾ ಚಿಕಿತ್ಸೆ ನೀಡುತ್ತಿದ್ದರು. ಆಗ ನಿಮ್ಮದೇ ಮಗು ಮಾಡಿಕೊಡೊದಾಗಿ ಹೇಳಿ ಆ ದಂಪಿತಿಯ ವೀರ್ಯಾಣು ಮತ್ತು ಅಂಡಾಣು ತೆಗೆದುಕೊಂಡಿದ್ದಳು.
ಅಂಡಾಣು ಮತ್ತು ವೀರ್ಯಾಣು ಬೇರೆ ಮಹಿಳೆಗೆ ಇಂಜೆಕ್ಟ್ ಮಾಡಿದ್ದೇನೆ. ಮಗು ಬೆಳೆಯುತ್ತಿದೆ ಎಂದು ಹೇಳುತ್ತಲೇ ಕಾಗೆ ಹಾರಿಸುತ್ತಿದ್ಳು. ಬಳಿಕ ದಂಪತಿಯ ಒತ್ತಡ ಹೆಚ್ಚಾದಾಗ ಮಗು ಕಳ್ಳತನ ಮಾಡಿಕೊಂಡು ಹೋಗಿದ್ದಾಲೆ..
ಅಲ್ಲದೇ ಕಳ್ಳತನ ಮಾಡಿದ್ದ ಮಮಗುವನ್ನ ಮತ್ತೊಂದು ದಂಪತಿಗೆ ಮಾರಿದ್ದಾಳೆ ಎನ್ನಲಾಗಿದೆ.. 1 ವರ್ಷದಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿ ಈಕೆ ಕೆಲಸ ಮಾಡ್ತಿದ್ದು, ಇದೀಗ ಸಿಕ್ಕಿಬಿದ್ದಿದ್ದಾಳೆ.. ಸದ್ಯ ಮಗುವನ ತಂದೆ ತಾಯಿಗೆ ಹಸ್ತಾಂತರಿಸಲಾಗಿದೆ ಎನ್ನಲಾಗಿದೆ. ಆರೋಪಿ ರೇಷ್ಮಾಳನ್ನ ವಿಚಾರಣೆಗೆ ಒಳಪಡಿಸಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.