ಮಕ್ಕಳಲ್ಲಿ ಹೆಚ್ಚು ಸೋಂಕು : ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ಯಾ ಕೊರೊನಾ 3ನೇ ಅಲೆ
ಬೆಂಗಳೂರು : ನಗರದಲ್ಲಿ ಹೆಚ್ಚಾಗಿ ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ.
ಇದು ಕೊರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚಾಗಿ ಬಾಧಿಸುತ್ತೆ ಎಂಬ ತಜ್ಞರ ಅಭಿಪ್ರಾಯ ನಿಜವಾಗಿದ್ಯಾ ಅನ್ನೋ ಅನುಮಾನ ಕಾರಣವಾಗಿದೆ.
ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಕಳೆದ 10 ದಿನಗಳ ವರದಿಯಲ್ಲಿ 499 ಮಕ್ಕಳಲ್ಲಿ ಹೆಮ್ಮಾರಿ ಸೋಂಕು ವಕ್ಕರಿಸಿದೆ.
ಅಲ್ಲದೆ ಕಳೆದ 5 ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 19 ವರ್ಷದೊಳಗಿನ 262 ಮಕ್ಕಳಿಗೆ ಸೋಂಕು ದೃಢಪಟ್ಟಿದೆ.
ಈ ಬೆಳವಣಿಗೆ ನಗರದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಂಡಿಡ್ಯಾ ಅನ್ನೋ ಆತಂಕದ ಜೊತೆಗೆ ಬಿಬಿಎಂಪಿಗೆ ತಲೆ ಬಿಸಿ ತಂದೊಡ್ಡಿದೆ.









