ತಾಲಿಬಾನ್ ಸರ್ಕಾರಕ್ಕೆ 230 ಕೋಟಿ ಘೋಷಿಸಿದ ಚೀನಾ China saaksha tv
ಬೀಜಿಂಗ್ : ಮೊದಲಿನಿಂದಲೂ ತಾಲಿಬಾನ್ ಪರ ಬ್ಯಾಟ್ ಬೀಸುತ್ತಿದ್ದ ಚೀನಾ ಇದೀಗ ತಾನಿಬಾನ್ ಸರ್ಕಾರಕ್ಕೆ 230 ಕೋಟಿ ರು. ನೆರವನ್ನು ಕೂಡ ಘೋಷಿಸಿದೆ.
ಈ ಬಗ್ಗೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಮಾಹಿತಿ ನೀಡಿದ್ದಾರೆ. ತಾಲಿಬಾನ್ ಸರ್ಕಾರ ಅಫ್ಘಾನ್ ನಲ್ಲಿ ಅರಾಜಕತೆಯನ್ನು ಕೊನೆಗೊಳಿಸಿದೆ.
ಆಡಳಿತವನ್ನು ಮರುಸ್ಥಾಪಿಸಲು ಇದೊಂದು ಅತ್ಯಗತ್ಯ ಕ್ರಮ. ಹೀಗಾಗಿ ತಾಲಿಬಾನ್ ಸರ್ಕಾರ ರಚನೆಗೆ ನಾವು ಬೆಂಬಲ ನೀಡುತ್ತೆವೆ ಎಂದಿದ್ದಾರೆ.
ಅಲ್ಲದೆ ಚಳಿಗಾಲದ ಆಹಾರ, ಲಸಿಕೆ ಮತ್ತು ಔಷಧ ಸಹಾಯಕ್ಕಾಗಿ 230 ಕೋಟಿ ನೆರವು ನೀಡುತ್ತೇವೆ ಎಂದು ತಿಳಿಸಿದ್ದಾರೆ.