ನೆಲಸಮಗೊಳಿಸಿದ ಮಸೀದಿಯ ಸ್ಥಳದಲ್ಲಿ ಶೌಚಾಲಯ ನಿರ್ಮಿಸುತ್ತಿರುವ ಚೀನಾ
ಬೀಜಿಂಗ್, ಅಗಸ್ಟ್ 18: ನೆಲಸಮಗೊಳಿಸಿದ ಮಸೀದಿಯ ಸ್ಥಳದಲ್ಲಿ ಚೀನಾದ ಅಧಿಕಾರಿಗಳು ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿದ್ದಾರೆ ಎಂದು ವರದಿಗಳು ಹೇಳಿದ್ದು ಈ ಮೂಲಕ ಅಲ್ಪಸಂಖ್ಯಾತ ಸಮುದಾಯದ ವಿರುದ್ಧದ ಚೀನಾ ದೌಜನ್ಯವು ಮತ್ತೊಂದು ಮಜಲನ್ನು ತಲುಪಿದೆ.

ಕ್ಸಿನ್ಜಿಯಾಂಗ್ನ ಅತುಶ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸುಂತಾಗ್ ಗ್ರಾಮದಲ್ಲಿರುವ ಮಸೀದಿಯನ್ನು 2018 ರಲ್ಲಿ ನೆಲಸಮ ಮಾಡಲಾಯಿತು. ಎರಡು ವರ್ಷಗಳ ನಂತರ, ಸಾರ್ವಜನಿಕ ಶೌಚಾಲಯವನ್ನು ಆ ಸ್ಥಳದಲ್ಲಿ ನಿರ್ಮಿಸಲಾಗಿದೆ. ಸುಂತಾಗ್ನ ಜನರು ಮನೆಯಲ್ಲಿ ಶೌಚಾಲಯಗಳನ್ನು ಹೊಂದಿದ್ದಾರೆ ಮತ್ತು ಕೇವಲ ಪ್ರವಾಸಿಗರಿಗಾಗಿ ಶೌಚಾಲಯವನ್ನು ನಿರ್ಮಿಸಲಾಗಿದೆ. ಸ್ಥಳೀಯ ಜನರಿಗೆ ಶೌಚಾಲಯದ ಅಗತ್ಯವಿಲ್ಲ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಾರೆ. ಆದರೂ ಚೀನಾದ ಅಧಿಕಾರಿಗಳು ಅದನ್ನು ಕೇಳಿಸಿಕೊಳ್ಳಲು ತಯಾರಿಲ್ಲ.
ಚೀನಾ ಕ್ಸಿನ್ಜಿಯಾಂಗ್ನ ಉಯಿಘರ್ ಮುಸ್ಲಿಮರನ್ನು ಗುರಿಯಾಗಿಸಲು ಬಯಸಿದೆ. ಕ್ಸಿನ್ಜಿಯಾಂಗ್ನಲ್ಲಿನ ಶೇಕಡಾ 70 ಮಸೀದಿಗಳನ್ನು ಈಗಾಗಲೇ ಚೀನಾ ನಾಶಪಡಿಸಿದೆ ಮತ್ತು ಅಲ್ಲಿ ಶೌಚಾಲಯಗಳನ್ನು, ಅಲ್ಕೋಹಾಲ್ ಮತ್ತು ಸಿಗರೇಟ್ ಅಂಗಡಿಗಳನ್ನು ನಿರ್ಮಿಸಲಾಗುತ್ತಿದೆ. 2019 ರಲ್ಲಿ ಚೀನಾ ಅಜ್ನಾ ಮಸೀದಿಯನ್ನು ನಾಶಪಡಿಸಿತು ಮತ್ತು ಅಲ್ಲಿ ಆಲ್ಕೋಹಾಲ್ ಮತ್ತು ಸಿಗರೇಟ್ ಮಾರಾಟ ಮಾಡುವ ಅಂಗಡಿಯನ್ನು ಸ್ಥಾಪಿಸಿತ್ತು. ಹೊಟಾನ್ ನಗರದಲ್ಲಿ, ನೆಲಸಮವಾದ ಮಸೀದಿಯ ಸ್ಥಳದಲ್ಲಿ ಒಳ ಉಡುಪು ಕಾರ್ಖಾನೆ ನಿರ್ಮಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಉಯಿಘರ್ ಮಾನವ ಹಕ್ಕುಗಳ ವರದಿ ಪ್ರಕಾರ ಬೀಜಿಂಗ್ ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಕ್ಸಿನ್ಜಿಯಾಂಗ್ನಲ್ಲಿ 10,000 ರಿಂದ 15,000 ಮಸೀದಿಗಳನ್ನು ನಾಶಪಡಿಸಿದೆ.

ಚೀನಾವು ಇಸ್ಲಾಂ ಧರ್ಮವನ್ನು ಸಮಾಜವಾದದೊಂದಿಗೆ ಹೊಂದಿಕೊಳ್ಳಲು ಮತ್ತು ಮುಸ್ಲಿಮರು ಸಾಂಪ್ರದಾಯಿಕ, ಪಾರಂಪರಿಕ ಪದ್ಧತಿಗಳನ್ನು ತ್ಯಜಿಸುವಂತೆ 5 ವರ್ಷಗಳ ಯೋಜನೆಯನ್ನು ಜಾರಿಗೆ ತಂದಿದೆ. ಅದಕ್ಕಾಗಿ ಕಾನೂನಿನಲ್ಲೂ ಮಾರ್ಪಾಡು ಮಾಡಿದ್ದು, ಮಸೀದಿ ಧ್ವಂಸಗೊಳಿಸುವ ಅಭಿಯಾನವನ್ನೂ ಪ್ರಾರಂಭಿಸಿದೆ. ಚೀನಾದಲ್ಲಿ 11 ಮಿಲಿಯನ್ ಉಯಿಘರ್ಗಳು ಸೇರಿದಂತೆ 22 ಮಿಲಿಯನ್ ಮುಸ್ಲಿಮರಿದ್ದಾರೆ.
ಬಹುಸಂಖ್ಯಾತ ಜನಾಂಗವಾಗಿರುವ ಹಾನ್ ಸಮಾಜದಲ್ಲಿ
ಇಸ್ಲಾಂ ಧರ್ಮವನ್ನು ಚೀನೀಯರನ್ನಾಗಿ ಮಾಡಲು ಬೀಜಿಂಗ್ ಯಾವುದೇ ಮಟ್ಟಿಗೆ ಹೋಗಲು ಸಿದ್ಧವಾಗಿದೆ. ಚೀನಾದ ಅಧಿಕಾರಿಗಳು 1.8 ಮಿಲಿಯನ್ ಉಯಿಘರ್ಗಳನ್ನು ಜೈಲಿಗೆ ಹಾಕಿದ್ದಾರೆ. ಅನೇಕರನ್ನು ಕೊಂದು ಅವರ ದೇಹವನ್ನು ಛಿದ್ರಗೊಳಿಸಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ ಮತ್ತು ಜನಸಂಖ್ಯಾ ನಿಯಂತ್ರಣಕ್ಕಾಗಿ ಬಲವಂತವಾಗಿ ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ.








