ADVERTISEMENT
Saturday, August 8, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕೊರೋನಾ ಉಗಮದ ತನಿಖೆ ‌ಎದುರಿಸಲು‌‌ ಸಿದ್ಧ – ಚೀನಾ…

admin by admin
May 19, 2020
in International, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಜಿನೀವಾ, ಮೇ 19 : ಸೋಮವಾರ ಜಿನೀವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಸಮ್ಮೇಳನ ಆರಂಭವಾಗಿದ್ದು ಕೊರೊನಾ ಉಗಮದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಸೂಕ್ತ ತನಿಖೆಯಾಗಬೇಕೆಂದು ಅಮೆರಿಕ ಆಗ್ರಹಿಸಿತು. ಕೊರೋನಾ ಉಗಮದ ತನಿಖೆಗೆ ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳು ಒತ್ತಾಯಿಸಿದ್ದು, ತನಿಖೆ ಕುರಿತ ಪ್ರಸ್ತಾಪ ಚರ್ಚೆ ಯಾಗಲೇ ಬೇಕೆಂದು ಆಗ್ರಹಿಸಿ ಸುಮಾರು 100ಕ್ಕೂ ಹೆಚ್ಚು ರಾಷ್ಟ್ರಗಳು ಸಹಿ‌ ಹಾಕಿದ್ದವು. ಯುರೋಪ್ ಒಕ್ಕೂಟವೂ ಇದಕ್ಕೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ತನಿಖಾ ಆಗ್ರಹಕ್ಕೆ ಇನ್ನಷ್ಟು ಬಲ ಬಂದಿತ್ತು. ಇದೀಗ ಜಗತ್ತಿನ ರಾಷ್ಟ್ರಗಳ ಆಗ್ರಹಕ್ಕೆ ಮಣಿದ ಡ್ರ್ಯಾಗನ್ ರಾಷ್ಟ್ರ ಚೀನಾ ಮನಸ್ಸಿಲ್ಲದ ಮನಸ್ಸಿನಿಂದ ಸಮ್ಮತಿ ಸೂಚಿಸಿದೆ. ಸಮ್ಮೇಳನದ ಮೊದಲ ದಿನ ಚೀನಾ ಪರ ವಿರೋಧಿ ರಾಷ್ಟ್ರಗಳ ‌ನಡುವೆ ಕಾವೇರಿದ ವಾತಾವರಣ ಸೃಷ್ಟಿಯಾಗಬಹುದು ಎಂದು ಅಂದಾಜಿಸಲಾಗಿತ್ತು. ‌ಆದರೆ ಚೀನಾದ ಅಧ್ಯಕ್ಷ ತನಿಖೆಗೆ ಒಪ್ಪಿಗೆ ಸೂಚಿಸಿ, ಜೊತೆಗೆ ಕೆಲವು ಕೊಡುಗೆಗಳನ್ನು ಘೋಷಿಸಿದ್ದಾರೆ.

ಬೀಜಿಂಗ್ ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಕ್ಸಿ ಜಿನ್ ಪಿಂಗ್ ಕೊರೊನಾ ಸೋಂಕಿನ ಬಗ್ಗೆ ನಮ್ಮ ರಾಷ್ಟ್ರ ಯಾವುದೇ ವಿಷಯಗಳನ್ನು ಮುಚ‌್ಚಿಟ್ಟಿಲ್ಲ.‌ ಪಾರದರ್ಶಕವಾಗಿ ಎಲ್ಲಾ ಮಾಹಿತಿಗಳನ್ನು ಜಗತ್ತಿಗೆ ನೀಡಿದೆ ಎಂದು ಸಮರ್ಥನೆಯನ್ನು ನೀಡಿದ್ದಾರೆ. ಕೊರೋನಾ ಸೋಂಕಿನಿಂದ ಉಂಟಾಗಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಜಗತ್ತಿನ ‌ರಾಷ್ಟ್ರಗಳ ಭಾವನೆಯನ್ನು ಗೌರವಿಸಿ, ತನಿಖೆಗೆ ಒಪ್ಪಿರುವುದಾಗಿ ಹೇಳಿರುವ ಚೀನಾ ಇದರ ಜೊತೆಗೆ ಕೊರೊನಾ ಸೋಂಕಿನಿಂದ ತೀವ್ರವಾಗಿ ಸಂಕಷ್ಟಕ್ಕೆ ಒಳಗಾಗಿರುವ ರಾಷ್ಟ್ರಗಳಿಗೆ 2 ಮಿಲಿಯನ್ ಡಾಲರ್ ಮೊತ್ತದ ನೆರವು ನೀಡುವುದಾಗಿ ಘೋಷಿಸಿತು. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆರ್ಡೋಸ್ ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಶ್ಲಾಘಿಸಿತು.

Related posts

film- ‘ನ್ಯಾಚುರಲ್ ಸ್ಟಾರ್’ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ!

film- ‘ನ್ಯಾಚುರಲ್ ಸ್ಟಾರ್’ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ!

August 8, 2026
malayalam-movie-half-tiff-selection-excel-entertainment-deal-kannada

Film – ಕೆನಡಾದ ‘ಟೊರೊಂಟೊ ಫಿಲ್ಮ್ ಫೆಸ್ಟಿವಲ್’ಗೆ ಮಲಯಾಳಂನ ‘ಹಾಫ್’ ಸಿನಿಮಾ ಆಯ್ಕೆ: ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಜೊತೆ ಬೃಹತ್ ಒಪ್ಪಂದ!

August 8, 2026

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆರ್ಡೋಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೊರೊನಾ ವೈರಸ್ ಹುಟ್ಟಿನ ಬಗ್ಗೆ ತನಿಖೆ ನಡೆಯಲಿದ್ದು , ಶೀಘ್ರವೇ ವರದಿಯೂ ಕೈ ಸೇರಲಿದೆ. ಕೊರೋನಾ ಪರಿಸ್ಥಿತಿ ನಮಗೆ ಹಲವು ಪಾಠಗಳನ್ನು ಕಲಿಸಿದೆ ಎಂದು ಹೇಳಿದ್ದಾರೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ಕಾರ್ಯದರ್ಶಿ ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಹಾಲಿ ಸ್ಥಿತಿಯನ್ನು ಅತ್ಯಂತ ಬೇಜವಾಬ್ದಾರಿಯುತವಾಗಿ ನಿಭಾಯಿಸಿದೆ. ಅಭಿವೃದ್ಧಿ ‌ಹೊಂದುತ್ತಿರುವ ರಾಷ್ಟ್ರಗಳಿಗೆ ಪೂರಕವಾಗಿ ವಿಶ್ವ ಆರೋಗ್ಯ ಸಂಸ್ಥೆ ವರ್ತಿಸಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.ಡಿಸೆಂಬರ್ 31, 2019 ರಂದು ವುಹಾನ್ ನಗರದಲ್ಲಿ ಕೊರೋನಾವೈರಸ್ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ವರದಿ ಮಾಡಿತು. ‌ ಆಗ ಚೀನಾದಲ್ಲಿ 44 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದವು ಮತ್ತು 11 ಮಂದಿಯ ಆರೋಗ್ಯ ಚಿಂತಾಜನಕವಾಗಿತ್ತು.‌ ವಿಶ್ವ ಆರೋಗ್ಯ ಸಂಸ್ಥೆಯು ಜನವರಿ 1 2020 ರಂದು ತುರ್ತು ಕ್ರ‌ಮ ಕೈಗೊಳ್ಳುವಂತೆ ಚೀನಾಕ್ಕೆ ಸೂಚಿಸಿತು. ಬಳಿಕ ವುಹಾನ್‌ನಲ್ಲಿ ಯಾವುದೇ ಸಾವುಗಳಾಗಿಲ್ಲ, ನ್ಯುಮೋನಿಯಾ ಪ್ರಕರಣಗಳು ಮಾತ್ರ ಇವೆ ಎಂದು ಜನವರಿ 4 ರಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿತ್ತು. ‌ಜನವರಿ 5 ರಂದು ವೈರಸ್ ಕುರಿತು ಸಂಶೋಧಿಸಲು ವಿಜ್ಞಾನಿಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರಿಗೆ ಸೂಚಿಸಲಾಯಿತು.

ಕೊರೊನಾ ವೈರಸ್ ಮಾನವನಿಂದ ಮಾನವರಿಗೆ ಹರಡುವುದಿಲ್ಲ ಎಂದ ವಿಶ್ವ ಆರೋಗ್ಯ ಸಂಸ್ಥೆಯು ಜನವರಿ 10ರಂದು ಎಲ್ಲಾ ದೇಶಗಳಿಗೆ ಕೊರೊನಾ ಪ್ರಕರಣಗಳನ್ನು ಹೇಗೆ ಕಂಡುಹಿಡಿಯುವುದು, ಪರೀಕ್ಷಿಸುವುದು ಮತ್ತು ನಿರ್ವಹಿಸುವುದು ಎಂಬುದರ ಕುರಿತು ತಾಂತ್ರಿಕ ಮಾರ್ಗದರ್ಶನ ಕಳುಹಿಸಿತು.‌ ಜನವರಿ 13 ರಂದು ಥೈಲ್ಯಾಂಡ್ ನಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಯಿತು. ಜನವರಿ 14 ರಂದು ಡಬ್ಲ್ಯುಎಚ್‌ಓದ ಕೊವಿಡ್-19ರ ತಾಂತ್ರಿಕ ಪ್ರಮುಖರಾದ ಮಾರಿಯಾ ವ್ಯಾನ್ ಕೆರ್ಖೋವ್ ಸುದ್ದಿಗೋಷ್ಠಿಯಲ್ಲಿ 41 ಪಾಸಿಟಿವ್ ಪ್ರಕರಣಗಳು ಇರುವ ಬಗ್ಗೆ ಮಾಹಿತಿ ನೀಡಿದರು ಮತ್ತು ಕೊರೋನಾ ಸೋಂಕು ಮನುಷ್ಯರಿಂದ ಮನುಷ್ಯರಿಗೆ ಹರಡಬಲ್ಲದು ಮತ್ತು ವ್ಯಾಪಕವಾಗಿ ಹರಡಬಹುದೆಂಬ ಅಪಾಯದ ಮುನ್ಸೂಚನೆ ನೀಡಿತು. ಅಲ್ಲಿಂದ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಾ ಹೋಗಿ ವಿಶ್ವದಾದ್ಯಂತ ‌ಪ್ರಸರಿಸಿತು. ಮಾರ್ಚ್ ಹೊತ್ತಿಗೆ ಜಗತ್ತಿನ ಬಹುತೇಕ ‌ರಾಷ್ಟ್ರಗಳು‌ ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿ ಮಾಡಿ ಕೊರೊನಾದ ವಿರುದ್ಧ ಸಮರ ಸಾರಿದವು. ಆದರೆ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ತನ್ನ ಸವಾರಿಯನ್ನು ಮುಂದುವರಿಸಿದ್ದು, ಕೋಟ್ಯಾಂತರ ‌ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಲಕ್ಷಾಂತರ ಜನ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

Tags: ChinaWorld health organization
ShareTweetSendShare
Join us on:

Related Posts

film- ‘ನ್ಯಾಚುರಲ್ ಸ್ಟಾರ್’ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ!

film- ‘ನ್ಯಾಚುರಲ್ ಸ್ಟಾರ್’ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ!

by admin
August 8, 2026
0

'ನ್ಯಾಚುರಲ್ ಸ್ಟಾರ್' ನಾನಿ ಅಭಿನಯದ 'ದಿ ಪ್ಯಾರಡೈಸ್' ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ! ಹೈದರಾಬಾದ್: 'ನ್ಯಾಚುರಲ್ ಸ್ಟಾರ್' ನಾನಿ ಅಭಿನಯದ ಬಹುನಿರೀಕ್ಷಿತ ಪ್ಯಾನ್-ವರ್ಲ್ಡ್...

malayalam-movie-half-tiff-selection-excel-entertainment-deal-kannada

Film – ಕೆನಡಾದ ‘ಟೊರೊಂಟೊ ಫಿಲ್ಮ್ ಫೆಸ್ಟಿವಲ್’ಗೆ ಮಲಯಾಳಂನ ‘ಹಾಫ್’ ಸಿನಿಮಾ ಆಯ್ಕೆ: ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಜೊತೆ ಬೃಹತ್ ಒಪ್ಪಂದ!

by admin
August 8, 2026
0

ಮುಂಬೈ: ಮಲಯಾಳಂ ಚಿತ್ರರಂಗದ ಬಿಗ್ ಬಜೆಟ್ ವ್ಯಾಂಪೈರ್ ಆಕ್ಷನ್ ಥ್ರಿಲ್ಲರ್ ‘ಹಾಫ್’ (HALF) ಸಿನಿಮಾವು ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. 'ಫ್ರಾಗ್ರೆಂಟ್ ನೇಚರ್ ಫಿಲ್ಮ್ ಕ್ರಿಯೇಷನ್ಸ್'...

jio-new-long-term-ott-pass-plans-kannada

ಜಿಯೋ ಒಟಿಟಿ-ಪಾಸ್ ವ್ಯಾಪ್ತಿ ವಿಸ್ತರಣೆ: 3 ತಿಂಗಳಿಗೆ 550 ರೂ., ವರ್ಷಪೂರ್ತಿ ಮನರಂಜನೆಗೆ 2000 ರೂ.

by admin
August 8, 2026
0

- 15 ಪ್ರೀಮಿಯಂ ಒಟಿಟಿ ಅಪ್ಲಿಕೇಶನ್ ಮತ್ತು 1,000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು - ಹೈ-ಸ್ಪೀಡ್ ಡೇಟಾ ಮತ್ತು ಅನ್‌ಲಿಮಿಟೆಡ್ 5G - ವರ್ಷಪೂರ್ತಿ...

dr-vidyabhushana-bhaja-mana-workshop-kannada

Bengaluru – ಡಾ. ವಿದ್ಯಾಭೂಷಣ್ ನೇತೃತ್ವದ ‘ಭಜ ಮನ’ ಕಾರ್ಯಾಗಾರಕ್ಕೆ ಅಭೂತಪೂರ್ವ ಸ್ಪಂದನೆ!

by admin
August 8, 2026
0

• ಜಯನಗರದಲ್ಲಿ ಯಶಸ್ವಿಯಾಗಿ ಜರುಗಿದ 'ಭಜ ಮನ' ಗಾಯನ ಕಾರ್ಯಾಗಾರ • ವಿದ್ಯಾಭೂಷಣ್ - ಮೇಧಾ ಅವರಿಂದ ಹೊಸ ತಲೆಮಾರಿಗೆ ದಾಸ ಸಾಹಿತ್ಯದ ಮಾರ್ಗದರ್ಶನ • ಸಂಗೀತಾಸಕ್ತರಿಗೆ...

nagara-panchami-2026-history-significance-kannada

Astro- ನಾಗರ ಪಂಚಮಿ: ಪ್ರಾಚೀನ ನಾಗಾರಾಧನೆ, ಮಹತ್ವ ಮತ್ತು ವಿಶೇಷ ಆಚರಣೆಗಳು

by admin
August 8, 2026
0

ಭಾರತೀಯ ಸನಾತನ ಸಂಸ್ಕೃತಿಯು ಪ್ರಕೃತಿಯನ್ನು ದೈವಸ್ವರೂಪವೆಂದು ಭಾವಿಸಿ ಆರಾಧಿಸುವ ವಿಶಿಷ್ಟ ಹಾಗೂ ಅನಾದಿ ಪರಂಪರೆಯನ್ನು ಹೊಂದಿದೆ. ಪ್ರಕೃತಿ ಆರಾಧನೆಯಲ್ಲಿ 'ನಾಗಾರಾಧನೆ'ಯು ಅತ್ಯಂತ ಪ್ರಾಚೀನ ಹಾಗೂ ಪ್ರಮುಖ ಸ್ಥಾನವನ್ನು...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram