Chitradurga | ಭಾರಿ ಮಳೆಗೆ ಕೋಡಿ ಬಿದ್ದ ಬೆಳಗೆರೆ ಕೆರೆ
ಚಿತ್ರದುರ್ಗ : ಸುಮಾರು ಐದು ಆರು ವರ್ಷಗಳ ನಂತರ ಚಳ್ಳಕೆರೆ ತಾಲೂಕಿನ ಬೆಳಗೆರೆ ಕೆರೆ ಕೋಡಿ ಬಿದ್ದಿದೆ. ಪರಿಣಾಮ ನೀರು ರಭಸವಾಗಿ ಹರಿದು ವೇದಾವತಿ ನದಿ ಸೇರುತ್ತದೆ.
ಚಳ್ಳಕೆರೆ ತಾಲೂಕಿನ ಐತಿಹಾಸಿಕ ಹಿನ್ನೆಲೆವುಳ್ಳ ಬೆಳಗೆರೆ ಕೆರೆಯು ಐದು ಆರು ವರ್ಷಗಳ ನಂತರ ಕೋಡಿ ಬಿದ್ದಿದೆ.
ಈ ಬಾರಿ ಸುರಿದ ಮಳೆಯಿಂದಾಗಿ ಬೆಳಗೆರೆ ಕೆರೆ ತುಂಬಿ ಕೋಡಿ ಬಿದ್ದಿದ್ದು ಕೋಡಿ ಸಮೀಪ ಮನೆ ಕಟ್ಟಿಕೊಂಡು ಅಕ್ಕ ಪಕ್ಕ ಇರುವಂತಹ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

ಬೆಳಗೆರೆ ಗ್ರಾಮದಿಂದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳುವಂತಹ ರಸ್ತೆ ಬಂದ್ ಆಗಿದ್ದು ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ತೆರಳಬೇಕಾದರೆ ನಾರಾಯಣಪುರ ಗ್ರಾಮದಿಂದ ಬರಬೇಕಾಗುತ್ತದೆ.
ಕೆರೆ ತುಂಬಿ ಕೋಡಿ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಂತೋಷ ಉಂಟಾಗಿದ್ದು ಕೆಲವು ಬೋರ್ವೆಲ್ ಗಳಲ್ಲಿ ನೀರು ಉಕ್ಕಿ ಬರುತ್ತಿದೆ.