Chitradurga ಕೋಟೆನಾಡಲ್ಲಿ ಅನಗತ್ಯ ಓಡಾಟಕ್ಕೆ ಖಾಕಿ ಬ್ರೇಕ್
ಚಿತ್ರದುರ್ಗ : ಕೋಟೆ ನಾಡಿನಲ್ಲಿ ಅನಗತ್ಯವಾಗಿ ಓಡಾಡುತ್ತಿರುವವರಿಗೆ ಹಿಡಿದು ಪೊಲೀಸರು ತಪಾಸಣೆ ನಡೆಸಿ ವಾಹನಗಳನ್ನು ಜಪ್ತಿ ಮಾಡುತ್ತಿದ್ದಾರೆ.
ಮಂಡಕ್ಕಿ ಬಟ್ಟಿಗೆ ಹೋಗುತ್ತಿದ್ದೆವೆ ಎಂದು ಸುಳ್ಳು ಹೇಳಿದ ದಂಪತಿಗಳ ವಿಚಾರಣೆ ನೆಡೆಸಿದ ಪೊಲೀಸರು ವಾಹನ ಸೀಜ್ ಮಾಡಿಕೊಂಡು ಅವರನ್ನು ಪೊಲೀಸ್ ಜೀಪಿನಲ್ಲಿ ಮನೆಗೆ ಬಿಡಲು ಹೊರಟಿತು.
ಕೊರೊನಾ ಎರಡನೇ ಅಲೆ ತಡೆಗಟ್ಟುವ ಹಿನ್ನೆಲೆಯಲ್ಲಿ ಸರ್ಕಾರ ಇಂದಿನಿಂದ ಲಾಕ್ ಡೌನ್ ಮಾಡಿದೆ.
ಆದರೆ ಅನಗತ್ಯವಾಗಿ ಜನರು ಆಟೋ, ಬೈಕ್ ಕಾರುಗಳಲ್ಲಿ ಓಡಾಡಿಕೊಂಡು ನಿಯಮವನ್ನು ಉಲ್ಲಂಘನೆ ಮಾಡಿದವರಿಗೆ ಅನಗತ್ಯವಾಗಿ ಹೊರಗೆ ಬಾರದಂತೆ ಎಚ್ಚರಿಕೆ ನೀಡಿದರು.










