Chitradurga | ಭಾರಿ ಮಳೆಗೆ ಕೊಚ್ಚಿ ಹೋದ ಈರುಳ್ಳಿ ಬೆಳೆ
ಚಿತ್ರದುರ್ಗ : ಜಿಲ್ಲೆಯ ಹಲವೆಡೆ ರಾತ್ರಿ ಭಾರಿ ಮಳೆಯಾಗಿದೆ.
ಪರಿಣಾಮ ಕೆರೆ ಕಟ್ಟೆಗಳು ಸಂಪೂರ್ಣ ಭರ್ತಿಯಾಗಿದ್ದು, ತುಂಬಿ ಹರಿಯುತ್ತಿವೆ.
ಈ ನಡುವೆ ಮಳೆ ನೀರಿಗೆ ಸಿಕ್ಕಿ ಅಪಾರ ಪ್ರಮಾಣದ ಈರುಳ್ಳಿ ಬೆಳೆ ನಾಶವಾಗಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೇವರಹಟ್ಟಿ ಗ್ರಾಮದಲ್ಲಿ ನಿನ್ನೆ ಧಾರಾಕಾರ ಮಳೆಯಾಗಿದೆ.

ಇದರಿಂದ ದೊರೆ ಓಬಯ್ಯ, ಚಿನ್ನಪ್ಪಯ್ಯ ಬೋರಯ್ಯ, ಬೋರಮ್ಮ, ಯರಪಾಲಯ್ಯ ಸೇರಿದಂತೆ ಹಲವರ ಜಮೀನಲ್ಲಿ ಬೆಳೆದಿದ್ದ ಈರುಳ್ಳಿ ನಾಶವಾಗಿದೆ.
ಕೊಯ್ಲು ಮಾಡಿ ಜಮೀನಲ್ಲಿ ಬಿಟ್ಟಿದ್ದ ಈರುಳ್ಳಿ ನೀರುಪಾಲಾಗಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
20ಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಹಾನಿಯಿಂದ ರೈತರು ಕಂಗಾಲಾಗಿದ್ದಾರೆ.