ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್..!
ಚುಟುಕು ಕ್ರಿಕೆಟ್‍ನ ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಐಪಿಎಲ್ ನಲ್ಲಿ ಆಡ್ತಾರೋ ಇಲ್ಲವೋ ಇನ್ನೂ ಗೊತ್ತಿಲ್ಲ. ಉಸೇನ್ ಬೋಲ್ಟ್ ಬರ್ತ್ ಡೇ ಪಾರ್ಟಿಯಲ್ಲಿ ಎಂಜಾಯ್ ಮಾಡಿದ್ದ ಕ್ರಿಸ್ ಗೇಲ್ ಈಗ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಯಾಕಂದ್ರೆ ಕೋವಿಡ್-19ನಿಂದಾಗಿ ವೇಗದೂತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದ್ರ ಬೆನ್ನಲ್ಲೇ ಹೋಮ್ ಕ್ವಾರಂಟೈನ್ ನಲ್ಲಿರುವ ಕ್ರಿಸ್ ಗೇಲ್ ಈಗಾಗಲೇ ಎರಡು ಬಾರಿ ಕೋವಿಡ್ ಟೆಸ್ಟ್‍ಗೆ ಒಳಪಟ್ಟಿದ್ದಾರೆ. ಆದ್ರೆ ಎರಡು ಟೆಸ್ಟ್ ನ ವರದಿಗಳು ನೆಗೆಟಿವ್ ಎಂದು ತೋರಿಸಿವೆ. ಹೀಗಾಗಿ ಕ್ರಿಸ್ ಗೇಲ್ ಐಪಿಎಲ್ ನಲ್ಲಿ ಆಡಲು ಸಿದ್ಧರಾಗಿದ್ದಾರೆ.
ಆದ್ರೆ ಐಪಿಎಲ್ ನಲ್ಲಿ ಅಷ್ಟೊಂದು ಸುಲಭವಾಗಿ ಆಡಲು ಸಾಧ್ಯವಿಲ್ಲ. ಕ್ರಿಸ್ ಗೇಲ್ ಯುಎಇಗೆ ಆಗಮಿಸಿದ್ದಾರೆ. ಹಾಗೇ ವಿಮಾನ ನಿಲ್ದಾಣದಲ್ಲೇ ಕೋವಿಡ್ ಟೆಸ್ಟ್‍ಗೆ ಒಳಪಟ್ಟಿದ್ದಾರೆ. ಬಳಿಕ ಅವರು ಆರು ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ. ನಂತರ ಕ್ರಿಸ್ ಗೇಲ್ ಮೂರು ಬಾರಿ ಕೋವಿಡ್ ಟೆಸ್ಟ್‍ಗೆ ಒಳಪಡಬೇಕಾಗುತ್ತದೆ. ಈ ಎಲ್ಲಾ ಪರೀಕ್ಷೆಗಳಲ್ಲಿ ನೆಗೆಟಿವ್ ಬಂದ ನಂತರವೇ ಕ್ರಿಸ್ ಗೇಲ್ ಜೈವಿಕ ಸುರಕ್ಷತೆಯಲ್ಲಿ ತರಬೇತಿ ಶಿಬಿರದಲ್ಲಿ ಭಾಗಿಯಾಗಬೇಕಾಗುತ್ತದೆ.
ಕಳೆದ ಜನವರಿಯಲ್ಲಿ ಕ್ರಿಸ್ ಗೇಲ್ ಅವರು ಬಾಂಗ್ಲಾ ದೇಶ ಪ್ರೀಮಿಯರ್ ಲೀಗ್ ನಲ್ಲಿ ಚಿತ್ತಗ್ರಾಮ್ ಚಾಲೆಂಜರ್ಸ್ ಟೂರ್ನಿಯಲ್ಲಿ ಆಡಿದ್ದರು. ಆದ್ರೆ ಸದ್ಯ ನಡೆಯುತ್ತಿರುವ ಕೆರೆಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವೈಯಕ್ತಿಕ ಕಾರಣದಿಂದಾಗಿ ಆಡುತ್ತಿಲ್ಲ. ಕ್ರಿಸ್ ಗೇಲ್ ಅವರು ಸೇಂಟ್ ಲೂಸಿಯಾ ಝೌಕ್ಸ್ ತಂಡದ ಪರ ಆಡಬೇಕಾಗಿತ್ತು,
ಈಗಾಗಲೇ 2020ರ ಐಪಿಎಲ್ ಟೂರ್ನಿಗೆ ಎಂಟೂ ತಂಡಗಳೂ ಯುಎಇನಲ್ಲಿ ಕ್ವಾರಂಟೈನ್ ನಲ್ಲಿದ್ದುಕೊಂಡು ತರಬೇತಿ ನಡೆಸುತ್ತಿವೆ. ಟೂರ್ನಿಯು ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ.