IPL 2022 | ಬರ್ತಿದ್ದಾನೆ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್..!!
ಐಪಿಎಲ್‌ನಲ್ಲಿ ಅತ್ಯಧಿಕ ಸೆಂಚೂರಿ ಯೋಧ, ಕೆರಿಬಿಯನ್‌ನ ವಿಧ್ವಂಸಕ ವೀರ, ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್, ಈ ವರ್ಷ (2022) ಐಪಿಎಲ್‌ನಿಂದ ಹೊರಗುಳಿದಿದ್ದಾರೆ.
ಫಾರ್ಮ್ ಮತ್ತು ವಯಸ್ಸಿನ ಕಾರಣದಿಂದಾಗಿ, ಅವರು ಐಪಿಎಲ್ 2022 ಮೆಗಾ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಲಿಲ್ಲ.
ಆದರೆ, ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ ನಲ್ಲಿ ಯೂನಿವರ್ಸಲ್ ಬಾಸ್ ಮಾಡಿರುವ ಪೋಸ್ಟ್ ಪ್ರಕಾರ ಅವರು ಐಪಿಎಲ್ ಗೆ ರೀ ಎಂಟ್ರಿ ಕೊಡುವ ಸೂಚನೆ ಕೊಟ್ಟಿದ್ದಾರೆ.
ವರ್ಕ್ ಜಸ್ಟ್ ಸ್ಟಾರ್ಟ್.. ಲೆಟ್ಸ್ ಗೋ.. ಮುಂದಿನ ವರ್ಷದ ಐಪಿಎಲ್‌ಗೆ ತಯಾರಿ ಶುರು.. ಎಂದು ವರ್ಕೌಟ್‌ಗಳ ವಿಡಿಯೋವನ್ನು ಗೇಲ್ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ನೋಡಿದ ಅವರ ಅಭಿಮಾನಿಗಳು.. ಬಾಸ್ ವಿಲ್ ಬಿ ಬ್ಯಾಕ್ ಎಂದು ಕಮೆಂಟ್ ಗಳನ್ನ ಮಾಡುತ್ತಿದ್ಧಾರೆ.
ಇನ್ನು ಕ್ರಿಸ್ ಗೇಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 142 ಪಂದ್ಯಗಳಲ್ಲಿ 6 ಶತಕ ಮತ್ತು 31 ಅರ್ಧ ಶತಕಗಳೊಂದಿಗೆ 4965 ರನ್ ಗಳಿಸಿದ್ದಾರೆ. ಇದರಲ್ಲಿ 405 ಬೌಂಡರಿ ಹಾಗೂ 357 ಸಿಕ್ಸರ್‌ಗಳು ಸೇರಿವೆ.
ಮೊದಲು ಕೆಕೆಆರ್ ಪರ ಕಾಣಿಸಿಕೊಂಡಿದ್ದ ಕ್ರಿಸ್ ಗೇಲ್ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದರು. ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ಯಾಂಪ್ ಸೇರಿದ ಗೇಲ್, ಐಪಿಎಲ್ ನಲ್ಲಿ ಇತಿಹಾಸ ನಿರ್ಮಿಸಿದ್ದರು. chris-gayle-will play-ipl-2023