ಯುವಿ ದಾಖಲೆ ಪುಡಿಗಟ್ಟಿದ ಕ್ರಿಸ್ : ಐಪಿಎಲ್ ನ ದುಬಾರಿ ಆಟಗಾರ ಮೋರಿಸ್
ಚೆನ್ನೈ : ಚೆನ್ನೈನಲ್ಲಿ 14ನೇ ಆವೃತ್ತಿಯ ಐಪಿಎಲ್ ಗಾಗಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಪ್ರಾಂಚೈಸಿಗಳು ಪಕ್ಕಾ ಲೆಕ್ಕಾಚಾರ ಹಾಕಿ ಆಟಗಾರರ ಖರೀದಿಗೆ ಮುಂದಾಗಿದ್ದಾರೆ.
ಈ ಮಧ್ಯೆ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಕ್ರಿಸ್ ಮೋರಿಸ್ ದಾಖಲೆ ಮೊತ್ತಕ್ಕೆ ಸೇಲ್ ಆಗುವ ಮೂಲಕ ಐಪಿಎಲ್ ನ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 16.25 ಕೋಟಿಗೆ ರಾಜಸ್ಥಾನ್ ತಂಡವನ್ನ ಸೇರಿದ್ದಾರೆ.
ಈ ಮೂಲಕ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರ ದಾಖಲೆಯನ್ನ ಅವರು ಮುರಿದು ಹಾಕಿದ್ದಾರೆ.
ಯುವರಾಜ್ ಸಿಂಗ್ ಈ ಹಿಂದೆ 16 ಕೋಟಿಗೆ ಸೇಲ್ ಆಗಿ ದಾಖಲೆ ನಿರ್ಮಿಸಿದ್ದರು. ಇದೀಗ ಈ ದಾಖಲೆಯನ್ನ ಕ್ರಿಸ್ ಮೋರಿಸ್ ಪುಡಿಗಟ್ಟಿದ್ದಾರೆ.
ಇನ್ನು ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರರ ಪಟ್ಟಿ ಹೀಗಿದೆ
ಮೊರಿಸ್ : 16.25 ಕೋಟಿ
ಯುವರಾಜ್ ಸಿಂಗ್ : 16 ಕೋಟಿ
ಕಮ್ಮಿನ್ಸ್ : 15.5 ಕೋಟಿ
ಬೆನ್ ಸ್ಟೋಕ್ಸ್ : 14.5 ಕೋಟಿ
ಯುವರಾಜ್ : 14ಕೋಟಿ