ಕಪಾಳಮೋಕ್ಷ ಮಾಡಿಸಿಕೊಂಡ ನಂತರ ಬದಲಾಯ್ತು ಕ್ರಿಸ್ ರಾಕ್ ಅದೃಷ್ಟ
ನಿರೂಪಕ ಕ್ರಿಸ್ ರಾಕ್ ಮತ್ತು ನಟ ವಿಲ್ ಸ್ಮಿತ್ ನಡುವಿನ ವಿವಾದದಿಂದಾಗಿ ಆಸ್ಕರ್ 2022 ಪ್ರಶಸ್ತಿ ಪ್ರದಾನ ಸಮಾರಂಭ ಸಖತ್ ಸುದ್ದಿಯಲ್ಲಿದೆ. ಕ್ರಿಸ್ ರಾಕ್ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾಗ ನಟ ವಿಲ್ ಸ್ಮಿತ್ ಅವರ ಪತ್ನಿಯ ಕುರಿತು ಗೇಲಿ ಮಾಡಿದರು. ಇದರಿಂದ ಸಿಟ್ಟಿಗೆದ್ದ ನಟ ವಿಲ್ ಸ್ಮಿತ್ ಕ್ರಿಸ್ ರಾಕ್ ಅವರಿಗೆ ಕಪಾಳಮೋಕ್ಷ ಮಾಡಿದರು. ಈ ವಿವಾದ ಜಗತ್ತಿನಾದ್ಯಂತ ಸುದ್ದಿ ಮಾಡುತ್ತಿದೆ. ಮತ್ತೊಂದೆಡೆ ಈ ಗಲಾಟೆ ನಂತರ ಕ್ರಿಸ್ ರಾಕ್ ಅದೃಷ್ಟವೂ ಬದಲಲಾಗಿದೆ. ಕ್ರಿಸ್ ರಾಕ್ ಯಾರು ಎಂದು ಎಲ್ಲರೂ ಅವರ ಕುರಿತು ಗೂಗಲ್‌ನಲ್ಲಿ ಮಾಡುತ್ತಿದ್ದಾರೆ. ಅಲ್ಲದೇ ಅವರು ನಡೆಸಿಉ ಕೊಡುವ ಸ್ಟಾಡ್ ಅಪ್ ಶೋಗಳಿಗೆ ಭಾರಿ ಬೇಡಿಕೆ ಬಂದಿದೆ.
VIA JAPANESE TELEVISION: The uncensored exchange between Will Smith and Chris Rock pic.twitter.com/j0Z184ZyXa
— Timothy Burke (@bubbaprog) March 28, 2022
ವಿಲ್ ಸ್ಮಿತ್ ಅವರಿಂದ ಕಪಾಳ ಮೋಕ್ಷ ಮಾಡಿಸಿಕೊಂಡ ನಂತರ ಕ್ರಿಸ್ ರಾಕ್ ಈಗ ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. ಕ್ರಿಸ್ ರಾಕ್ ಅವರ ಮುಂಬರುವ ಸ್ಟ್ಯಾಂಡ್ ಅಪ್ ಶೋಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಾಗಿದೆ. ಅಷ್ಟೇ ಅಲ್ಲ, ಶೋಗಳ ಟಿಕೆಟ್ ದರವೂ ಭಾರಿ ಜಿಗಿತಕಂಡಿದೆ. ಟಿ ‘ನಾವು ಕಳೆದ ರಾತ್ರಿ ಕ್ರಿಸ್ ರಾಕ್ ಅವರ ಶೋ ಗಾಗಿ ಮಾರಿದ ಟಿಕೆಟ್ ಗಳನ್ನ ಇಡೀ ತಿಂಗಳಲ್ಲಿ ಮಾರಿರಲಿಲ್ಲ ಎಂದು ಕ್‌ಪಿಕ್ ಟ್ವೀಟ್ ಮಾಡಿದೆ.
ಮಾಹಿತಿಯ ಪ್ರಕಾರ, ಮಾರ್ಚ್ 18 ರಂದು, ಕ್ರಿಸ್ ರಾಕ್ ಒಂದು ಶೋ ನಡೆಸಿಕೊಟ್ಟಿದ್ದರು ಆಗ ಟಿಕೆಟ್ ಬೆಲೆ $ 46 (ರೂ. 3500). ಆದರೆ ಈಗ ಕ್ರಿಸ್ ಪ್ರದರ್ಶನದ ಟಿಕೆಟ್ ದರ $ 411 (ರೂ. 31, 274) ಡಾಲರ್ ಕ್ರಿಸ್ ರಾಕ್ ಅವರ ಕಾರ್ಯಕ್ರಮದ ಟಿಕೆಟ್ ದರಗಳು ಗಗನಕ್ಕೇರಿದ್ದು, ಎಲ್ಲರನ್ನೂ ಅಚ್ಚರಿಗೆ ತಳ್ಳಿದೆ.
ಕ್ರಿಸ್ ರಾಕ್ ಮಾರ್ಚ್ 30 ಮತ್ತು ಏಪ್ರಿಲ್ 1 ರಂದು ಬೋಸ್ಟನ್‌ನ ವಿಲ್ಬರ್ ಥಿಯೇಟರ್‌ನಲ್ಲಿ ಸ್ಟಾಡ್ ಅಪ್ ಶೋ ನೀಡಲಿದ್ದಾರೆ. ಇದಾದ ಬಳಿಕ ಕ್ರಿಸ್ ರಾಕ್ ಅವರ ವರ್ಲ್ಡ್ ಟೂರ್’ ಏಪ್ರಿಲ್ 2ರಿಂದ ಆರಂಭವಾಗಲಿದೆ. ಬರೋಬ್ಬರಿ 30 ನಗರಗಳನ್ನು ಪ್ರವಾಸ ಮಾಡಲಿದ್ದಾರೆ. ನ್ಯೂಯಾರ್ಕ್, ಲಾಸ್ ವೇಗಾಸ್, ಟೊರಾಂಟೊ, ಚಿಕಾಗೋ ಮುಂತಾದ ಹಲವು ಸ್ಥಳಗಳಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ವಿಶೇಷವೆಂದರೆ ಕ್ರಿಸ್ ರಾಕ್ ಅವರ ಈ ಪ್ರವಾಸವು ನವೆಂಬರ್ 17 ರಂದು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಕೊನೆಗೊಳ್ಳಲಿದೆ. ಈ ಸ್ಥಳದಲ್ಲೇ ಕ್ರಿಸ್ ರಾಕ್ ಅವರು ವಿಲ್ ಸ್ಮಿತ್ ಕೈಯಿಂದ ಕಪಾಳ ಮೋಕ್ಷ ಮಾಡಿಸಿಕೊಂಡ ಸ್ಥಳವಿದು.