ರಣರಂಗವಾದ `ಸಿಂಘು ಗಡಿ’ : ಪೊಲೀಸರ ಮೇಲೆ ತಲ್ವಾರ್ ದಾಳಿ
ನವದೆಹಲಿ : ದೆಹಲಿಯ ಸಿಂಘು ಗಡಿ ರಣರಂಗವಾಗಿದೆ. ಗಡಿಯಲ್ಲಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪೊಲೀಸರ ಮೇಲೆ ತಲ್ವಾರ್ ದಾಳಿ ನಡೆದಿದೆ.
ಸಿಂಘು ಗಡಿಯಲ್ಲಿ ಪ್ರತಿಭಟನಾನಿರತ ರೈತರು ಹಾಗೂ ಸ್ಥಳೀಯರ ನಡುವೆ ಸಂಘರ್ಷ ನಡೆದಿದೆ. ಇದನ್ನ ನಿಯಂತ್ರಿಸಲು ಪೊಲೀಸರು ಮುಂದಾಗಿದ್ದು, ಲಾಠಿ ಬೀಸಿದ್ದಾರೆ.
ಇದರಿಂದ ರೊಚ್ಚಿಗೆದ್ದಿರುವ ಪ್ರತಿಭಟನಾಕಾರರು, ಪೆÇಲೀಸ್ ಇನ್ಸ್ ಪೆಕ್ಟರ್ ಮೇಲೆಯೇ ದಾಳಿ ನಡೆಸಿದ್ದಾರೆ.
ತಲ್ವಾರ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಪೊಲೀಸ್ ಅಧಿಕಾರಿಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ನಡೆಸಿದವರನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಸಿಂಘು ಗಡಿಯಲ್ಲಿ ಸ್ಥಳೀಯರು ಮತ್ತು ರೈತರ ನಡುವೆ ಪರಿಸ್ಥಿತಿ ಉದ್ವಿಘ್ನಗೊಂಡಿದೆ. ರೈತರ ಪ್ರತಿಭಟನೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ರೈತರ ಟೆಂಟ್ ಗಳ ಮೇಲೆ ಕಲ್ಲು ತೂರಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಈ ಹಿನ್ನೆಲೆ ಸ್ಥಳೀಯರು ರೈತರ ನಡುವೆಯೇ ಪರಿಸ್ಥಿತಿ ತೀವ್ರ ಉದ್ವಿಘ್ನಗೊಂಡಿದೆ.
ಇತ್ತ ಪರಿಸ್ಥಿತಿ ನಿಯಂತ್ರಣಕ್ಕೆ ಮಧ್ಯಪ್ರವೇಶಿಸಿದ ಪೆÇಲಿಸರ ಜೊತೆಗೆ ರೈತರ ಸಂಘರ್ಷ ಆರಂಭವಾಗಿದೆ.
ಪರಿಸ್ಥಿತಿ ಹತೋಟಿಗೆ ತರಲು ಪೆÇಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಸಿಡಿಸಿದ್ದಾರೆ.
ಜೊತೆಗೆ ಲಾಠಿ ಚಾರ್ಜ್ ನಡೆಸಿದ್ದಾರೆ. ಇತ್ತ ಪ್ರತಿಭಟನಾ ನಿರತರು ಪೆÇಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel