ಶಿಕ್ಷಕರನ್ನ ಬಂಧಿಸುವಂತೆ ಪೊಲೀಸರನ್ನ ಕೇಳಿದ 2 ತರಗತಿ ಬಾಲಕ…
2 ನೇ ಓದುವ ತರಗತಿ ಅನಿಲ್ ನಾಯ್ಕ್ ಎಂಬ ಬಾಲಕನೊಬ್ಬ ಪೊಲೀಸ್ ಠಾಣೆಯ ಮೆಟ್ಟಿಲೇರಿ ಶಿಕ್ಷರನ್ನ ಬಂಧಿಸುವಂತೆ ದೂರು ನೀಡಿರುವ ಘಟನೆ ತೆಲಂಗಾಣದ ಮಹಬೂಬಾಬಾದ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಟೀಚರ್ ಗೆ ಶಿಕ್ಷೆ ನೀಡುವಂತೆ ಕೇಳಿಕೊಂಡಿದ್ದಾನೆ.
ಬಾಲಕ ಪೊಲೀಸ್ ಠಾಣೆಗೆ ಬಂದಿದ್ದು ನೋಡಿ ಲೇಡಿ ಪೊಲೀಸ್ ಇನ್ಸ್ಪೆಕ್ಟರ್ ರಮಾದೇವಿ ಅವರು ಠಾಣೆಗೆ ಏಕೆ ಬಂದ್ದು ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಚೆನ್ನಾಗಿ ಓದುತ್ತಿಲ್ಲ ಅಂತ ಟೀಚರ್ ನನ್ನು ಹೊಡೆದಿದ್ದಾರೆ ಎಂದು ಬಾಲಕ ಹೇಳಿದ್ದಾನೆ.
ಬೇರೆ ಯಾರಿಗಾದರೂ ಟೀಚರ್ ಹೊಡೆದಿದ್ದಾರ ಎಂದು ಪ್ರಶ್ನಿಸಿದಕ್ಕೆ ಅನಿಲ್ ನಾಯಕ್ ಇಲ್ಲ ಎಂದಿದ್ದಾನೆ. ಕೇವಲ ತನಗೆ ಮಾತ್ರ ಹೊಡೆದಿದ್ದಾಗಿ ಹೇಳಿಕೊಂಡಿದ್ದಾನೆ.
ಬಾಲಕ ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಬಯ್ಯಾರಂ ಮಂಡಲದ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಯಾಗಿದ್ದಾನೆ.
ಬಾಲಕನ ಮಾತುಗಳನ್ನ ಸಾವಧಾನದಿಂಧ ಆಲಿಸಿದ ಇನ್ಸಪೆಕ್ಟರ್ ಸಮಸ್ಸೆ ಬಗೆಹರಿಸಲು ಅವನನ್ನ ಕರೆದುಕೊಂಡು ಶಾಲೆಗೆ ತೆರಳಿದ್ದಾರೆ. ಆದರೆ ಆ ಬಾಲಕ ರಾಜಿಗೆ ಒಪ್ಪಿಕೊಂಡೆ ಇಲ್ಲ.. ಬಳಿಕ ಹುಡುಗನ ಜೊತೆ ಮಾತನಾಡಿ ಸಮಸ್ಸೆ ಬಗೆಹರಿಸಿದ್ದಾರೆ.
Class 2 student in Telangana asks police to arrest his teacher over physical punishment.