ಪೆನ್ಸಿಲ್ ಕದ್ದಿದ್ದಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ 3ನೇ ತರಗತಿ ಬಾಲಕ (video)

1 min read

ಪೆನ್ಸಿಲ್ ಕದ್ದಿದ್ದಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ 3ನೇ ತರಗತಿ ಬಾಲಕ (video)

ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತೋದು ಅಂದ್ರೇ ದೊಡ್ಡವರೆ ಹೆದರಿಕೊಳ್ತಾರೆ.  ಅಂತಾದ್ರಲ್ಲಿ 3 ನೆ ತರಗತಿ ಓದುತ್ತಿರುವ  ಪೋರರು ಧೈರ್ಯವಾಗಿ ಪೊಲೀಸ್ ಸ್ಟೇಷನ್ ಹೋಗಿ ಕಂಪ್ಲೆಂಟ್ ಕೊಟ್ಟಿದ್ದಾರೆ. ಅಷ್ಟಕ್ಕೂ ಈ ಬಾಲಕರು ಪೊಲೀಸರ ಹತ್ರ ದೂರು ಕೊಟ್ಟಿದ್ದು ಯಾಕೆ ಅಂತ ಗೊತ್ತಾದ್ರೆ ನಿಮ್ಮಲ್ಲೂ ನಗು ತರಿಸುತ್ತೆ.

ಆಂಧ್ರ ಪ್ರದೇಶದ ಕರ್ನೂಲ್ ಪೊಲೀಸ್ ಠಾಣೆಗೆ ಬಂದ ಮೂರನೆ ತರಗತಿ ಬಾಲಕನೊಬ್ಬ  ತನ್ನ ಸ್ನೇಹಿತನ ವಿರುದ್ದ ಪೆನ್ಸಿಲ್ ಕದ್ದಿರುವುದಾಗಿ ಠಾಣೆಗೆ ದೂರು ನೀಡಿದ್ದಾನೆ.  ಪೊಲೀಸ್ ಸ್ಟೇಷನ್ ನಲ್ಲಿ ನಡೆದ ಬಾಲಕರ ಸಂಭಾಷಣೆಯನ್ನ ಪೊಲಿಸರು ಟ್ವೀಟರ್ ನಲ್ಲಿ ಅಪ್ಲೋಡ್ ಮಾಡಿದ್ದು ವೀಡಿಯೋ ಸಖತ್ ವೈರಲ್ ಆಗಿದೆ.

ಬಾಲಕರು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನ ಮಾಡಿಕೊಂಡಿದ್ದು  ಪ್ರತಿದಿನ ತಾನು ತೆಗೆದುಕೊಂಡು ಬರುವ ಪೆನ್ಸಿಲ್ ನ  ಗೆಳಯ ಕಳ್ಳತನ ಮಾಡುತ್ತಿದ್ದಾನೆ ಎಂದು ದೂರು ಹೇಳುತ್ತಾನೆ. ಇದಕ್ಕೆ ಪಕ್ಕದಲ್ಲಿರರುವ ಸ್ನೇಹಿತ ನಾನು ಕದ್ದಿಲ್ಲ ಎಂದು ಹೇಳುತ್ತಾನೆ.

ಇಬ್ಬರ ಮಾತನ್ನು ಕೇಳುವವ ಪೊಲೀಸ್ ಕೊನೆಗೆ ಈ ಥರ ಮಾಡಬಾರದು ಎದ್ದು ಬುದ್ದಿವಾದ  ಹೇಳಿ ರಾಜಿ ಮಾಡಿಸುತ್ತಾರೆ. “ಶಾಲಾ ಮಕ್ಕಳು ಕೂಡ ಆಂಧ್ರ ಪೊಲೀಸರ ಮೇಲೆ ನಂಬಿಕೆ ಇಡುತ್ತಾರೆ ಎಂದು ಬರೆದುಕೊಂಡು ವೀಡಿಯೋ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd