ಪ್ರಖ್ಯಾತ ಪ್ರವಾಸಿ ತಾಣ ಫರ್ನಾಸ್ ಸರೋವರದಲ್ಲಿ ಭಾರಿ ದುರಂತ Cliff collapses on Boaters In Brazil Lake 7 tourists killed
ಬ್ರೆಜಿಲ್ : ಸರೋವರದಲ್ಲಿ ಮೂರು ಬೋಟ್ ಗಳ ಮೇಲೆ ಗುಡ್ಡ ಕುಸಿದು ಸುಮಾರು ಏಳು ಮಂದಿ ಮೃತಪಟ್ಟಿರುವ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ.
ಬ್ರೆಜಿಲ್ನ ಪ್ರಖ್ಯಾತ ಪ್ರವಾಸಿ ತಾಣ ಫರ್ನಾಸ್ ಸರೋವರದಲ್ಲಿ ಈ ದುರಂತ ನಡೆದಿದ್ದು, ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, 32 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಪಾಯದಲ್ಲಿ ಸಿಲುಕಿರುವವರನ್ನು ರಕ್ಷಿಸಲು ಬ್ರೆಜಿಲ್ ನೇವಿ ಮತ್ತು ಸ್ಥಳೀಯ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
https://twitter.com/i/status/1479848764940640258
ಶನಿವಾರ ಮಧ್ಯಾಹ್ನ 12.30ರ ಹೊತ್ತಿಗೆ ಘಟನೆ ನಡೆದಿದ್ದು, ದೊಡ್ಡ ಕಲ್ಲುಗುಡ್ಡದ ಒಂದು ಭಾಗ ಒಡೆದು ಮೂರು ಬೋಟ್ಗಳ ಮೇಲೆ ಬಿದ್ದಿದೆ. ಇದರಿಂದ ಏಳು ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ನಿನ್ನೆಯಿಂದಲೂ ಅಗ್ನಿಶಾಮಕದಳ, ನೌಕಾಪಡೆ ಸಿಬ್ಬಂದಿ ಅಲ್ಲಿಯೇ ಬೀಡುಬಿಟ್ಟಿದ್ದಾರೆ.
ಇನ್ನು ಈ ದುರಂತದ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.








