ನಡು ರಸ್ತೆಯಲ್ಲಿ ನೋಟಿನ ಮಳೆ – ಎದ್ನೋ ಬಿದ್ನೋ ಅಂತ ಬಾಚಿಕೊಂಡ ಜನ
ದುಡ್ಡೆ ದೊಡ್ಡಪ್ಪ ಪುಗಸಟ್ಟೆ ಸಿಕ್ರೆ ಬಿಡ್ತಾರೇನಪ್ಪಾ……ಅದೂ ನಡು ಬೀದಿಯಲ್ಲಿ ನೋಟಿನ ಮಳೆಯೇ ಸುರಿದಾಗ ಬಿಡೊದುಂಟಾ
ಅಮೆರಿಕಾದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ರಸ್ತೆಯಲ್ಲೆಲ್ಲಾ ನೋಟಿನ ಮಳೆಯೇ ಸುರಿದಿದೆ. ಹಾಗಂತ ಅದೇನು ಫೇಕ್ ಹಣ ಅಲ್ಲ. ಒರಿಜಿಲ್ ಹಣವೇ. ಹಣ ಅಂದ್ರೆ ಹೆಣನೇ ಬಾಯ್ಬಿಡುತ್ತೆ ಇನ್ನೂ ಬದುಕಿದ್ದೋರು ಸುಮ್ನೆ ಬಿಡ್ತಾರ ಎದ್ನೋ ಬಿದ್ನೋ ಅಂತ ಕೈಗೆ ಸಿಕ್ಕಷ್ಟು ಹಣವನ್ನ ಬಾಚಿಕೊಂಡಿದ್ದಾರೆ… ಬ್ಯಾಂಕ್ ಗೆ ಹಣ ತುಂಬುವ ಸಲುವಾಗಿ ಫೆಡರಲ್ ಡಿಪಾಸಿಟ್ ಕಾರ್ಪ್ ಇನ್ಸೂರೆನ್ಸ್ ಕಂಪನಿ ಟ್ರಕ್ ನಲ್ಲಿ ಸಾಗುತ್ತಿತ್ತು.. ಆದ್ರೆ ಇದ್ದಕ್ಕಿದ್ದ ಹಾಗೇ ಟ್ರಕ್ ನ ಒಂದು ಬಾಗಿಲು ಬಾಗಿಲು ತೆಗೆದುಕೊಂಡು ಹಣ ಚೆಲ್ಲಾಪಿಲ್ಲಿಯಲ್ಲಿ ಹರಿದಾಡಿದೆ.
ರೋಡಿನಲ್ಲಿ ಹಣದ ಮಳೆ ಕಂಡ ಜನ ಓಡೋಡಿ ಬಂದು ಸಿಕ್ಕಷ್ಟು ಹಣವನ್ನ ಬ್ಯಾಗ್ ನಲ್ಲಿ ತುಂಬಿಕೊಂಡಿದ್ದಾರೆ.ಕಡೆಗೆ ಘಟನಾ ಸ್ಥಳಕ್ಕೆ ಬ್ಯಾಂಕ್ ಅಧಿಕಾರಿಗಳು ಹಾಗೂ ಪೊಲೀಸರು ಬಂದಿದ್ದು, ಇಬ್ಬರನ್ನು ಅರೆಸ್ಟ್ ಕೂಡಾ ಮಾಡಿದ್ದಾರೆ. ಆದ್ರೆ ಎಷ್ಟು ಹಣ ಕಳವಾಗಿದೆ ಅನ್ನೋ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ. ಅಧಿಕಾರಿಗಳು ಹಣ ವಾಪಸ್ ನೀಡುವಂತೆ ಮನವಿ ಮಾಡಿದ್ದಾರೆ.