ನಿಮ್ದು ಏನಾದ್ರೂ ಸಿಡಿ ಇದ್ಯಾ : ಮೈಸೂರು ಪ್ರಾಂತ್ಯದ ಸಚಿವರಿಗೆ ಸಿಎಂ ಪ್ರಶ್ನೆ..?
1 min read
ನಿಮ್ದು ಏನಾದ್ರೂ ಸಿಡಿ ಇದ್ಯಾ : ಮೈಸೂರು ಪ್ರಾಂತ್ಯದ ಸಚಿವರಿಗೆ ಸಿಎಂ ಪ್ರಶ್ನೆ
ಬೆಂಗಳೂರು : ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ರಮೇಶ್ ಜಾರಕಿಹೊಳಿ ಅವರ ರಾಸಲೀಲೆಯ ಈ ವಿಡಿಯೋ ಸರ್ಕಾರಕ್ಕೆ ಭಾರಿ ಮುಜುಗರ ತಂದೊಡ್ಡಿದೆ.
ಈ ಮಧ್ಯೆ ಇನ್ನೇನು ಕೆಲವೇ ದಿನಗಳಲ್ಲಿ ಮೈಸೂರು ಭಾಗದ ನಾಯಕರ ಸಿಡಿ ಬಿಡುಗಡೆಯಾಗಲಿದೆ ಎಂಬ ವಿಚಾರ ರಾಜ್ಯದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆ ಮೈಸೂರು ಪ್ರಾಂತ್ಯದ ಸಚಿವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಬುಲಾವ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ಮಾಧ್ಯಮಗಳಲ್ಲಿ ಮೈಸೂರು ಪ್ರಾಂತ್ಯದ ಸಚಿವರ ಸಿಡಿ ಬಿಡುಗಡೆ ಆಗುತ್ತೆ ಅನ್ನೋ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸಿಎಂ ಬಿಎಸ್ ವೈ ಮೈಸೂರು ಭಾಗದ ಸಚಿವರ ಜತೆ ಸಭೆ ನಡೆಸಿದ್ದಾರಂತೆ.
ಸಚಿವರು ತಮ್ಮ ಕಚೇರಿಗೆ ಕರೆಸಿಕೊಂಡು, ನಿಮ್ದು ಏನಾದ್ರೂ ಸಿಡಿ ಇದ್ಯಾ ಎಂದು ಪ್ರಶ್ನೆ ಮಾಡಿದ್ರರಂತೆ. ಅಲ್ಲದೆ ಒಂದು ವೇಳೆ ಸಿಡಿಗಳು ಇದ್ದರೇ ಯಾವುದೇ ಕಾರಣಕ್ಕೂ ಅವು ಬಿಡುಗಡೆಯಾಗಬಾರದು ಎಂದು ಸೂಚನೆ ಕೊಟ್ಟಿದ್ದಾರಂತೆ.
ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿಯಿಂದ ಈಗಾಗಲೇ ಸರ್ಕಾರಕ್ಕೆ ಧಕ್ಕೆಯಾಗಿದೆ. ಮುಂದೆ ಯಾವ್ ಸಿಡಿ ಕೂಡ ಬಿಡುಗೆಯಾಗಬಾರದು ಎಂದು ಸಚಿವರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಗಂಭೀರವಾಗಿ ತಾಕೀತು ಮಾಡಿದ್ದಾರೆ ಅನ್ನೋ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
