ಬಿಎಸ್ ವೈಗೆ ಕ್ಯಾಚ್ ಹಾಕೋದು ಗೊತ್ತು, ರೈಡ್ ಮಾಡೋದು ಗೊತ್ತು: ಆರ್.ಅಶೋಕ್

R.Ashok _reacts_to _the_photo_with_drug_dealer_Rahul

ಕೊಪ್ಪಳ : ಯಡಿಯೂರಪ್ಪ ಅವರು ಕಬಡ್ಡಿ ತಂಡದ ನಾಯಕ. ಹೀಗಾಗಿ ಅವರಿಗೆ ಕ್ಯಾಚ್ ಹಾಕೋದು ಗೊತ್ತು, ರೈಡ್ ಮಾಡೋದು ಗೊತ್ತು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸಿಎಂ ದೆಹಲಿ ಭೇಟಿ ಬಗ್ಗೆ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಯಡಿಯೂರಪ್ಪ ಕಬಡ್ಡಿ ತಂಡದ ಕ್ಯಾಪ್ಟನ್. ಹೀಗಾಗಿ ಅವರಿಗೆ ಕ್ಯಾಚ್ ಹಾಕೋದು ಗೊತ್ತು, ರೈಡ್ ಮಾಡೋದು ಗೊತ್ತು. ಯಡಿಯೂರಪ್ಪ ರಾಜಾಹುಲಿ ಅಂತ ನಾನು ಯಾವಾಗ್ಲೋ ಹೇಳಿದ್ದೀನಿ. ಅವರು ಒಂದು ತರಹ ಕಬಡ್ಡಿ ಟೀಂ ಕ್ಯಾಪ್ಟನ್. ನಮ್ಮ ಕರ್ನಾಟಕ ಹಣಕಾಸಿನ ವಿಷಯದಲ್ಲಿ ಇಡೀ ದೇಶದಲ್ಲಿ ಮಾದರಿಯಾಗಿರುತ್ತೆ. ಇಂದು ಯಡಿಯೂರಪ್ಪ ಕೇಂದ್ರ ಸರ್ಕಾರವನ್ನ ಭೇಟಿ ಮಾಡಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರದ ಮನವೊಲಿಸಿ ಹೆಚ್ಚು ಹಣ ತರ್ತಾರೆ ಎಂದು ತಿಳಿಸಿದರು.

ಇನ್ನಷ್ಟು ಸುದ್ದಿಗಳನ್ನು ಓದಿ

ಇದೇ ವೇಳೆ ಸಿಎಂ ಬದಲಾವಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶೋಕ್, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆ ಇಲ್ಲ. ಮುಂದಿನ ಮೂರು ವರ್ಷ ಯಡಿಯೂರಪ್ಪರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This