CM Bommai: ಗಲಭೆ ಹಿಂದೆ‌ ಯಾರಾರರು ಇದ್ದಾರೆ ಅವರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳುತ್ತೇವೆ : ಸಿಎಂ

1 min read
Shivamogga Saaksha Tv

ಗಲಭೆ ಹಿಂದೆ‌ ಯಾರಾರರು ಇದ್ದಾರೆ ಅವರ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳುತ್ತೇವೆ : ಸಿಎಂ

ಶಿವಮೊಗ್ಗ : ವಿಡಿಯೋ ಸಾಕ್ಷಿಗಳ ಆಧಾರದ ಮೇಲೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಕುರಿತು ತನಿಕೆ ನಡೆಸಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗಲಭೆ ಹಿಂದೆ‌ ಯಾರು ಯಾರು ಇದ್ದಾರೆ ಎಂಬುದು ತನಿಖೆಯಲ್ಲಿ ತಿಳಿದು ಬರುತ್ತಿದೆ. ಆದಷ್ಟು ಬೇಗ ಎಲ್ಲರನ್ನೂ ದಸ್ತಗಿರಿ ಮಾಡಲಾಗುವುದು. ಅಂದು ನಡೆದ ಎಲ್ಲವೂ ನಮ್ಮ ತನಿಖೆಗೆ ಒಳಪಟ್ಟಿದೆ.ಇನ್ನೂ ಯುಪಿಯಲ್ಲಿ ಧಂಗೆಗಳಾದಾಗ ಕಠಿಣ ಕ್ರಮಕೈಗೊಂಡಿದ್ದರು. ಅಲ್ಲಿಯ ಪರಿಸ್ಥಿತಿ ಆಧರಿಸಿ ಕ್ರಮ ಕೈಗೊಂಡಿದ್ದರು ಎಂದರು.

ಆದರೆ, ನಾವು ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳುತ್ತೇವೆ. ಹಿಂದೆ‌ ಡಿಜೆಹಳ್ಳಿ, ಕೆಜಿಹಳ್ಳಿ ಗಲಭೆಯಾದಾಗ ಕಠಿಣ ಕ್ರಮಕೈಗೊಂಡಿದ್ದೇವೆ. ಈ ಪ್ರಕರಣದಲ್ಲಿ ರಿಕವರಿ ಕಮಿಷನ್ ನೇಮಿಸಿದ್ದೇವೆ.‌ ಗಲಭೆ ಮಾಡಿದವರಿಗೆ ತಕ್ಕ ಪಾಠವಾಗಿದೆ. ಪ್ರಚೋದನೆ ಮಾಡಿದಾಗ ತಕ್ಕ ಪಾಠ ಕಲಿಸುವ ಕೆಲಸವಾಗಿದೆ ಎಂದು ಹೇಳಿದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd