ನಾಟಿ ವೈದ್ಯರಿಂದ ಮಂಡಿ ನೋವಿಗೆ ಚಿಕಿತ್ಸೆ ಪಡೆದುಕೊಂಡ ಸಿ ಎಂ
ಮಂಡಿ ನೋವಿನಿಂದ ಬಳಲುತ್ತಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇಂದು ನಾಟಿ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡರು. ಮೈಸೂರು ಮೂಲದ ನಾಟಿ ವೈದ್ಯರಾದ ಲೋಕೇಶ್ ಟೇಕಲ್ ಅವರು ಬೊಮ್ಮಾಯಿ ಅವರಿಗೆ ಚಿಕಿತ್ಸೆ ನಿಡಿದ್ದಾರೆ.
ಅಧಿವೇಶನ ವೇಳೆ ಬೆಳಗಾವಿಯ ವಿಟಿಯು ಗೆಸ್ಟ್‌ಹೌಸ್‌ನಲ್ಲಿ ತಂಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಸಲಹೆ ಮೇರೆಗೆ ಚಿಕಿತ್ಸೆಗೆ ಒಳಗಾದರು. ಚರ್ಮರೋಗದಿಂದ ಬಳಲುತ್ತಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿಗೂ ಸಹ ಚಿಕಿತ್ಸೆ ಪಡೆದುಕೊಂಡರು.

ನಾಟಿ ವೈದ್ಯ ಲೋಕೇಶ್ ಟೇಕಲ್ ಅವರಿಂದ ಚಿಕಿತ್ಸೆ ಪಡೆದು ಲಕ್ಷ್ಮಣ ಸವದಿ ಿಹಿಂದೆ ಗುಣಮುಖರಾಗಿದ್ದರು ಈಗಾಗಿ ಅಧಿವೇಶನದ ವೇಳೆ ನಾಟಿ ವೈದ್ಯರನ್ನ ಲಕ್ಷ್ಮಣ ಸವದಿ ಅವರು ಸಿ ಎಂ ಗೆ ಪರಿಚಯಿಸಿದ್ದರು.
ಸದ್ಯ ಸಿಎಂ ಬಸವರಾಜ ಬೊಮ್ಮಾಯಿಗೆ ವನಸ್ಪತಿ ಔಷಧಿ ನೀಡಿರುವ ನಾಟಿ ವೈದ್ಯ ಲೋಕೇಶ್ ಚಿಕಿತ್ಸೆ ಮುಂದುವರೆಸಿದ್ದಾರೆ…








