CM Bommai | ವಿಧಾನಸೌಧದ ಎದುರು ಕೆಂಪೇಗೌಡರ ಪ್ರತಿಮೆ
ಬೆಂಗಳೂರು : ಮುಂಬರುವ ಕೆಂಪೇಗೌಡ ಜಯಂತಿ ಒಳಗೆ ವಿಧಾನಸೌಧದ ಎದುರು ಕೆಂಪೇಗೌಡ ಮೂರ್ತಿ ಅನಾವರಣ ಮಾಡ್ತೀವಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕೆಂಪೇಗೌಡರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ದೇಶದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಅಂದರೆ ಬೆಂಗಳೂರು.
ಜನರಿಗಿಂತ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ನಮ್ಮಲ್ಲಿ ಒಳ್ಳೆಯ ಭೂಮಿ ಇರೋದ್ರಿಂದ ವಿಸ್ತರಣೆ ಜಾಸ್ತಿ ಆಗ್ತಿದೆ.
ಸಮಸ್ಯೆಗಳ ಬಗ್ಗೆ ಚರ್ಚೆ ಮಾಡ್ತಿಲ್ಲ, ಆದರೆ ಸಮಸ್ಯೆ ಗುರುತಿಸಿ ಅದಕ್ಕೆ ಪರಿಹಾರ ಆಗ್ತಿದೆ.
ಸಮಗ್ರವಾದ ಬೆಂಗಳೂರು ಅಭಿವೃದ್ಧಿ ಗೆ ಪರಿಣಿತರ ಜೊತೆ ಚರ್ಚೆ ಆಗ್ತಿದೆ.
ದೂರದೃಷ್ಟಿ ಇಟ್ಟುಕೊಂಡು ಸಂಚಾರಿ ನಿಯಮ, ರಸ್ತೆ ಅಭಿವೃದ್ಧಿಯನ್ನು ಮಾಡ್ತೀವಿ ಎಂದು ಹೇಳಿದರು.

ಬೆಂಗಳೂರನ್ನೆ ಇವತ್ತು ಹುಡುಕಿ ಬರಲು ಜ್ಞಾನ ಅವಶ್ಯಕವಾಗಿದೆ. ವಿದೇಶದಿಂದ ಬಂಡವಾಳ ಹೂಡಿಕೆ ಮಾಡಲು ಇಲ್ಲಿಗೆ ಬರ್ತಿದ್ದಾರೆ.
ಅವರಿಗೆ ನಾವು ಎಲ್ಲ ರೀತಿಯ ಸೌಕರ್ಯ ಕೊಟ್ಟಾಗ ಆಧುನಿಕ ಬೆಂಗಳೂರಾಗಿ ಬೆಳೆಯುತ್ತದೆ.
ಹೊಸ ಬೆಂಗಳೂರಾಗಿ ಪರಿವರ್ತನೆ ಮಾಡೋದು ನಮ್ಮೆಲ್ಲರ ಕರ್ತವ್ಯವಾಗಿದೆ.
ಮಾಜಿ ಸಿಎಂ ಎಸ್ ಎಂಕೆ ಅಂದು ಬೆಂಗಳೂರು ಸಿಂಗಾಪುರ್ ಆಗಿ ಮಾಡ್ತೀನಿ ಅಂದಿದ್ರು.
ಅವಾಗ ಎಲ್ಲರು ಹಾಸ್ಯ ಮಾಡಿದ್ರು. ಆದರೆ ಆ ನಂತರ ಬಂದ ಎಲ್ಲಾ ಸರ್ಕಾರಗಳು ಆ ಕೆಲಸ ಮಾಡಬೇಕಿತ್ತು.
ಇವಾಗ ನಾವು ಆ ದೂರದೃಷ್ಟಿಯಲ್ಲಿ ಮಾಡುವ ಅವಶ್ಯಕತೆ, ಅನಿವಾರ್ಯತೆ ಇದೆ, ಅದನ್ನು ನಾವು ಮಾಡೇ ಮಾಡ್ತೀವಿ ಎಂದು ಭರವಸೆ ನೀಡಿದರು.
ಇವಾಗ ವಿಕಾಸಸೌಧ ಕಟ್ಟಿದವರು ಎಸ್ಎಂಕೆ ಅವರು. ನಮ್ಮ ನಾಯಕರಾದ ಯಡಿಯೂರಪ್ಪ ಉತ್ತರ ಕರ್ನಾಟಕ ಭಾಗದಲ್ಲಿ ಸುವರ್ಣ ಸೌಧ ಕಟ್ಟಿದವರು.
ಹೀಗಾಗಿ ಎಸ್ಎಂಕೆ ದೂರದೃಷ್ಟಿ, ಬದ್ದತೆಯೇ ಮೂಲಕ ನಾವು ಅಭಿವೃದ್ಧಿಯತ್ತ ಸಾಗುತ್ತೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.








