ಹಾವೇರಿ : ಉಕ್ರೇನ್ ನಲ್ಲಿ ಪ್ರಾಣ ಕಳೆದುಕೊಂಡು ಕರ್ನಾಟಕದ ಹಾವೇರಿ ಮೂಲದ ಯುವಕ ನವೀನ್ ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದ್ದಾರೆ..
ಹಾವೇರಿಯ ಚಳಗೇರಿಗೆ ಭೇಟಿ ನೀಡಿದ ಸಿಎಂ ನವೀನ್ ಮನೆಗೆ ಭೇಟಿ ನೀಡಿ ನವೀನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಮನ ಸಲ್ಲಿಸಿದ್ದಾರೆ.. ನವೀನ್ ಪೋಷಕರಿಗೆ ಸಿಎಂ ಸಾಂತ್ವಾನ ಹೇಳಿದ್ದಾರೆ.
ಸಿಎಂ ಜೊತೆಗೆ ಸಚಿವ ಬಿ ಸಿ ಪಾಟೀಲ್ ಹಾಗೂ ಶಾಸಕ ಅರುಣ್ ಪೂಜಾರಿ ಉಪಸ್ಥಿತಿದರಿದ್ದರು.. ನವೀನ್ ತಂದೆ ಶೇಖರಪ್ಪ , ತಾಯಿ ವಿಜಯಲಕ್ಷ್ಮಿ ಜೊತೆ ಸಿಎಂ ಮಾತನಾಡಿದ್ದಾರೆ.
ಇದೇ ವೇಳೆ ನವೀನ್ ತಂದೆ ಶೇಖರಪ್ಪ ಅವರಿಗೆ ಸಿಎಂ ಬಬೊಮ್ಮಾಯಿ ಅವರು , ಪರಿಹಾರ ಚೆಕ್ ವಿತರಣೆ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ನವೀನ್ ಕುಟುಂಬಕ್ಕೆ 25 ಲಕ್ಷ ರೂಪಾಯಿಯ ಪರಿಹಾರದ ಚೆಕಕ್ ನೀಡಲಾಗಿದೆ.