ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ನಿವಾಸದ ದೀಪಾಲಂಕಾರಕ್ಕೆ ಅಕ್ರಮ ವಿದ್ಯುತ್ ಪಡೆದ ಪ್ರಕರಣಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಗದಾ ಪ್ರಹಾರ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ತಪ್ಪು ಮಾಡಿದ್ದಕ್ಕೆ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲಾಗಿದೆ. ತಪ್ಪು ಆಗಿದೆ ನನಗೆ ಪಶ್ಚಾತ್ತಾಪ ಆಗಿದೆ ಎಂದರೆ ಅದು ಶಿಕ್ಷೆಯಾಗುತ್ತದೆಯೇ ಎಂದು ವ್ಯಂಗ್ಯವಾಡಿದ್ದಾರೆ. ಕುಮಾರಸ್ವಾಮಿ ಅವರ ಹೇಳಿಕೆಗಳು ಸುಳ್ಳಿನಿಂದ ಕುಡಿರುತ್ತವೆ. ಹೀಗಾಗಿ ನಾನು ಅವರ ಸುಳ್ಳುಗಳಿಗೆ ಉತ್ತರ ನೀಡುವುದಿಲ್ಲ. ಜೆಡಿಎಸ್ ಎಂಬುವುದು ಪಕ್ಷವಲ್ಲ. ಅದು ಅದು ದೇವೇಗೌಡ ಮತ್ತು ಕುಟಂಬದ ಪಾರ್ಟಿ ಎಂದು ಹೇಳಿದ್ದಾರೆ.
ನಿವಾಸದ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಪಡೆದ ವಿಚಾರವಾಗಿ ಕುಮಾರಸ್ವಾಮಿ ವಿರುದ್ಧ ಮಂಗಳವಾರ ಎಫ್ಐಆರ್ ದಾಖಲಾಗಿತ್ತು. ಇದು ರಾಜಕೀಯ ಕಚ್ಚಾಟಕ್ಕೆ ಕಾರಣವಾಗಿತ್ತು. ಸ್ಪಷ್ಟನೆ ನೀಡಿದ್ದ ಕುಮಾರಸ್ವಾಮಿ, ತಮ್ಮ ಗಮನಕ್ಕೆ ಬಾರದೆ ಆ ರೀತಿ ನಡೆದಿದೆ. ಅಧಿಕಾರಿಗಳು ಬಂದು ತನಿಖೆ ನಡೆಸಲಿ. ಸಂಪೂರ್ಣ ಸಹಕಾರ ನೀಡುವೆ. ಬೆಸ್ಕಾಂ ವಿಧಿಸುವ ದಂಡ ಕೂಡ ಪಾವತಿಸುವೆ ಎಂದು ಹೇಳಿದ್ದಾರೆ. ಜೆಡಿಎಸ್ ಕಚೇರಿಯ ಗೋಡೆ ಮೇಲೆ ವಿದ್ಯುತ್ ಕಳ್ಳ ಕುಮಾರಸ್ವಾಮಿ ಎಂಬ ಭಿತ್ತಿ ಪತ್ರಗಳನ್ನು ಕೂಡ ವಿರೋಧಿಗಳು ಹಾಕಿದ್ದಾರೆ.