ಎಲ್ಲರೂ ದಯವಿಟ್ಟು ಲಸಿಕೆ ಪಡೆಯಿರಿ, ಕೊರೊನಾ ವಿರುದ್ಧದ ಹೋರಾಡಲು ಇದು ಅಗತ್ಯ : ಸಿಎಂ ಬಿಎಸ್ ವೈ
ಬೆಂಗಳೂರು : ಕೊರೊನಾ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಸಿಎಂ ಬಿ ಎಸ್ ಯಡಿಯೂರಪ್ಪನವರು ಟ್ವಿಟ್ಟರ್ ಮೂಲಕ ಜನರಿಗೆ ಮನವಿ ಮಾಡಿಕೊಂಡಿದ್ದಾರೆ. ಜನರು ದಯಮಾಡಿ ಲಸಿಕೆ ಪಡೆದುಕೊಂಡು ಸರ್ಕಾರದ ಜೊತೆಗೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಸಾಥ್ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
‘ಕೋವಿಡ್ ಲಸಿಕೆ ಸಂಪೂರ್ಣ ಸುರಕ್ಷಿತ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೋವಿಡ್ ಲಸಿಕೆ ಪಡೆದುಕೊಳ್ಳಿ, ಇದು ನಿಮ್ಮ, ನಿಮ್ಮ ಕುಟುಂಬದ ಮತ್ತು ಸಮಾಜದ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
ನಾನೂ ಕೂಡ ಕೋವಿಡ್ ಲಸಿಕೆ ಪಡೆದುಕೊಂಡಿದ್ದೇನೆ. ನಿಯಮಗಳನ್ವಯ ಎಲ್ಲ ಅರ್ಹರೂ ಕೋವಿಡ್ ಲಸಿಕೆ ಪಡೆದುಕೊಳ್ಳಿ ಎಂದು ಮನವಿ ಮಾಡುತ್ತೇನೆ. ಇದು ಸಂಪೂರ್ಣ ಸುರಕ್ಷಿತ ಮತ್ತು ಕೊರೋನಾ ಮಣಿಸಲು ಅಗತ್ಯ. ಇದರ ಜೊತೆಗೆ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ನೈರ್ಮಲ್ಯ ಪಾಲಿಸುವುದನ್ನು ತಪ್ಪದೇ ಪಾಲಿಸಿ, ಸರ್ಕಾರದೊಂದಿಗೆ ಸಹಕರಿಸಿ’ ಎಂದು ಸಲಹೆ ನೀಡಿದ್ದಾರೆ.
3 ತಿಂಗಳ ಬಳಿಕ ಮತ್ತೆ ಹೆಚ್ಚಾಯ್ತು ಕೊರೊನಾ ಕೇಸಸ್ ..!
ಬೆಳಗಾವಿ : ಕೋವಿಡ್ ಲಸಿಕೆ ಪಡೆದ 9 ಗಂಟೆಯೊಳಗೆ ವೃದ್ಧ ಸಾವು
ಬಿಟ್ ಕಾಯಿನ್ ನ ಪ್ರಸ್ತುತ ಬೆಲೆ..!
ಉತ್ತರಪ್ರದೇಶ : ಬಸ್ ಅಪಘಾತ – 14 ಜನರಿಗೆ ಗಂಭೀರ ಗಾಯ
ಆಂಡ್ರಾಯ್ಡ್ ನಲ್ಲಿರುವ ಶೇ. 5ರಷ್ಟು ಆ್ಯಪ್ ಗಳು ಭಾರತೀಯರು ರೂಪಿಸಿರುವುದು : ರವಿಶಂಕರ್ ಪ್ರಸಾದ್








