3 ತಿಂಗಳ ಬಳಿಕ ಮತ್ತೆ ಹೆಚ್ಚಾಯ್ತು ಕೊರೊನಾ ಕೇಸಸ್ ..!

1 min read
JP Nagar

3 ತಿಂಗಳ ಬಳಿಕ ಮತ್ತೆ ಹೆಚ್ಚಾಯ್ತು ಕೊರೊನಾ ಕೇಸಸ್ ..!

ನವದೆಹಲಿ : ಭಾರತದಲ್ಲಿ ಕೊರೊನಾವೈರಸ್ ಅಬ್ಬರ ಮತ್ತೆ ಮುಂದುವರೆದಿದೆ.  ಕೆಲ ದಿನಗಳ ವರೆಗೂ ಕಡಿಮೆಯಾಗಿದ್ದ ಕೊರೊನಾ ಪ್ರಕರಣಗಳು ಇದೀಗ ಮತ್ತೆ ಹೆಚ್ಚಾಗಿದೆ. ಭಾರತದಲ್ಲಿ ಒಂದೇ ದಿನ 39726 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, 103 ದಿನಗಳ ಬಳಿಕ ಕಳೆದ 24 ಗಂಟೆಯಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಆತಂಕ ಸೃಷ್ಟಿ ಮಾಡಿದೆ.  2020ರ ನವೆಂಬರ್ 29ರ ಬಳಿಕ ಗರಿಷ್ಠ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಒಂದೇ ದಿನ 154 ಜನರು ಮಹಾಮಾರಿಗೆ ಬಲಿಯಾಗಿದ್ದು, 20,654 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಬಿಟ್‌ ಕಾಯಿನ್ ನ ಪ್ರಸ್ತುತ ಬೆಲೆ..!

ಭಾರತದಲ್ಲಿ ಒಟ್ಟು 1,15,14,331 ಕೋವಿಡ್ ಪ್ರಕರಣಗಳಿದ್ದು, ಭಾರತದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದವರ ಸಂಖ್ಯೆ 1,59,370ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಸೋಂಕು ಪ್ರಮಾಣ ಹೆಚ್ಚುತ್ತಿರುವಂತೆಯೇ ಚೇತರಿಕೆ ಪ್ರಮಾಣ ಶೇ.96.41ಕ್ಕೆ ಕುಸಿದಿದೆ. ಈವರೆಗೆ 1.10ಕೋಟಿ ಮಂದಿ ಚೇತರಿಸಿಕೊಂಡಿದ್ದಾರೆ. ಉಳಿದಂತೆ 2,71,282 ಸಕ್ರಿಯ ಪ್ರಕರಣಗಳಿವೆ. ಇನ್ನೂ ದೇಶದಲ್ಲಿ ಈವರೆಗೂ 3,93,39,817 ಮಂದಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ.

ಆಂಡ್ರಾಯ್ಡ್‌ ನಲ್ಲಿರುವ ಶೇ. 5ರಷ್ಟು ಆ್ಯಪ್ ಗಳು ಭಾರತೀಯರು ರೂಪಿಸಿರುವುದು : ರವಿಶಂಕರ್‌ ಪ್ರಸಾದ್‌

ಬೆಳಗಾವಿ : ಕೋವಿಡ್ ಲಸಿಕೆ ಪಡೆದ 9 ಗಂಟೆಯೊಳಗೆ ವೃದ್ಧ ಸಾವು

ಉತ್ತರಪ್ರದೇಶ : ಬಸ್ ಅಪಘಾತ – 14 ಜನರಿಗೆ ಗಂಭೀರ ಗಾಯ

ಭಾರತದಲ್ಲಿ ಸ್ಥಿರತೆ ಕಾಯ್ದಕೊಂಡಿರುವ ಇಂಧನ ಬೆಲೆ : ಇಳಿಕೆಯೂ ಇಲ್ಲ, ಏರಿಕೆಯೂ ಇಲ್ಲ..!  

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd