ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿ ಪಟ್ಟಿಯನ್ನು ರಾಜಭವನಕ್ಕೆ ಕಳಿಸಿದ್ದು, ರಾಜ್ಯಪಾಲ ವಜುಬಾಯ್ ವಾಲಾ ಅಂಕಿತ ಹಾಕಿದ್ದಾರೆ. ಈ ಸಂಬಂಧ ಅಧಿಕೃತ ಆದೇಶವೊಂದೇ ಬಾಕಿ ಇದೆ.
ಈ ನಡುವೆ, ನೂತನ ಸಚಿವರಿಗೆ ನಿರೀಕ್ಷೆಯಂತೆ ಪ್ರಭಾವಿ ಖಾತೆಗಳನ್ನು ನೀಡಿಲ್ಲ. ಅದರಲ್ಲೂ ವಲಸೆ ಸಚಿವರಿಗೆ ಖಾತೆ ಹಂಚಿಕೆಯಲ್ಲಿ ಬಿಗ್ ಶಾಕ್ ನೀಡಿದ್ದಾರೆ.
ಕೆಲ ಸಚಿವರ ಬಳಿ ಇದ್ದ ಪ್ರಭಾವಿ ಖಾತೆಗಳನ್ನು ವಾಪಸ್ ಪಡೆದಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರಭಾವಿ ಖಾತೆಯ ನಿರೀಕ್ಷೆಯಲ್ಲಿದ್ದ ವಲಸೆ ಸಚಿವರಿಗೂ ಬಿಎಸ್‍ವೈ ನಿರಾಸೆ ಮೂಡಿಸಿದ್ದಾರೆ.

ಪ್ರಮುಖವಾಗಿ ಎಂಟಿಬಿ ನಾಗರಾಜ್, ವಸತಿ ಅಥವಾ ಬೆಂಗಳೂರು ನಗರಾಭಿವೃದ್ಧಿ ಖಾತೆಯ ನಿರೀಕ್ಷೆಯಲ್ಲಿದ್ದರು. ಆದರೆ, ಎಂಟಿಬಿ ನಾಗರಾಜ್‍ಗೆ ಅಬಕಾರಿ ಖಾತೆ ನೀಡಿದ್ದಾರೆ.
ತಮಗೆ ಅಬಕಾರಿ ಖಾತೆ ನೀಡಿರುವುದಕ್ಕೆ ಅಸಮಾಧಾನಗೊಂಡಿರುವ ಸಚಿವ ಎಂಟಿಬಿ ನಾಗರಾಜ್, ಬೆಳ್ಳಂಬೆಳಿಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಬಕಾರಿ ಖಾತೆ ಬೇಡ. ನನಗೆ ಬೇರೆ ಖಾತೆ ಕೊಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ, ಕೋವಿಡ್ ನಿರ್ವಹಣೆ ಕಾರಣಕ್ಕೆ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಸುಧಾಕರ್‍ಗೆ ಶ್ರೀರಾಮುಲು ಬಳಿ ಇದ್ದ ಆರೋಗ್ಯ ಇಲಾಖೆಯನ್ನು ನೀಡಿ ಡಬಲ್ ಗಿಫ್ಟ್ ನೀಡಲಾಗಿತ್ತು. ಆದರೆ, ಇಂದಿನ ಖಾತೆ ಹಂಚಿಕೆಯಲ್ಲಿ ಸಚಿವ ಸುಧಾಕರ್‍ಗೆ ಮತ್ತೆ ಶಾಕ್ ನೀಡಿದ್ದಾರೆ. ಸುಧಾಕರ್‍ಗೆ ಕೇವಲ ಆರೋಗ್ಯ ಖಾತೆಯನ್ನು ಬಿಟ್ಟು, ವೈದ್ಯಕೀಯ ಖಾತೆಯನ್ನು ಜೆ.ಸಿ ಮಾಧುಸ್ವಾಮಿಗೆ ಹಂಚಿಕೆ ಮಾಡಿದ್ದಾರೆ.
ಗೃಹ ಖಾತೆ ನಿರೀಕ್ಷೆಯಲ್ಲಿದ್ದ ಆರ್.ಅಶೋಕ್‍ಗೆ ಮತ್ತೆ ನಿರಾಸೆಯಾಗಿದೆ. ಪ್ರಭಾವಿ ಆಹಾರ ಖಾತೆ ಹೊಂದಿದ್ದ ಕೆ.ಗೋಪಾಲಯ್ಯ ಅವರಿಗೂ ಶಾಕ್ ನೀಡಿದ್ದು, ಈ ಖಾತೆಯನ್ನು ಉಮೇಶ್ ಕತ್ತಿಗೆ ನೀಡಲಾಗಿದೆ.
ಜತೆಗೆ ಆನಂದ್‍ಸಿಂಗ್‍ಗೂ ಆಘಾತ ನೀಡಿರುವ ಬಿಎಸ್‍ವೈ, ಅರಣ್ಯ ಇಲಾಖೆಯನ್ನು ಅರವಿಂದ ಲಿಂಬಾವಳಿಗೆ ನೀಡಿ, ಪ್ರವಾಸೋದ್ಯಮ ಖಾತೆ ನೀಡಿದ್ದಾರೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಕಾನೂನು ಮತ್ತು ಸಂಸದೀಯ ಖಾತೆಯನ್ನು ಹೆಚ್ಚುವರಿಯಾಗಿ ನೀಡ ಡಬಲ್ ಗಿಫ್ಟ್ ಕೊಡಲಾಗಿದೆ.
ಯಾರಿಗೆ ಯಾವ ಖಾತೆ..ಪಟ್ಟಿ ಕೆಳಗಿನಂತಿದೆ.
1. ಬಸವರಾಜ ಬೊಮ್ಮಾಯಿ-ಗೃಹ, ಕಾನೂನು ಮತ್ತು ಸಂಸದೀಯ ಖಾತೆ
2. ಸುಧಾಕರ್- ಆರೋಗ್ಯ ಖಾತೆ
3. ಜೆ.ಸಿ ಮಾಧುಸ್ವಾಮಿ- ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ
4. ಕೆ.ಗೋಪಾಲಯ್ಯ- ಸಕ್ಕರೆ, ತೋಟಗಾರಿಕೆ ಖಾತೆ
5. ಆನಂದ್‍ಸಿಂಗ್- ಪ್ರವಾಸೋದ್ಯಮ, ಪರಿಸರ ಖಾತೆ
6. ನಾರಾಯಣಗೌಡ- ಯುವಜನ ಸೇವೆ ಮತ್ತು ಕ್ರೀಡೆ
8. ಕೋಟ ಶ್ರೀನಿವಾಸಪೂಜಾರಿ- ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ
9. ಸಿ.ಸಿ ಪಾಟೀಲ್- ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಪ್ರಸಾರ
ನೂತನ ಸಚಿವರು
1. ಉಮೇಶ್ ಕತ್ತಿ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ
2. ಮುರುಗೇಶ್ ನಿರಾಣಿ, ಗಣಿ ಮತ್ತು ಭೂವಿಜ್ಞಾನ
3. ಅರವಿಂದ ಲಿಂಬಾವಳಿ- ಅರಣ್ಯ ಖಾತೆ
4. ಎಂಟಿಬಿ ನಾಗರಾಜ್- ಅಬಕಾರಿ ಖಾತೆ
5. ಎಸ್.ಅಂಗಾರ -ಬಂದರು, ಮೀನುಗಾರಿಕೆ, ಒಳನಾಡು ಸಾರಿಗೆ
6. ಆರ್.ಶಂಕರ್-ಪೌರಾಡಳಿತ, ರೇಷ್ಮೆ
7. ಸಿ.ಪಿ ಯೋಗೇಶ್ವರ್- ಸಣ್ಣ ನೀರಾವರಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








