ಬೆoಗಳೂರು: ರಾಜಕೀಯವಾಗಿ ಏನೇ ಭಿನ್ನಾಭಿಪ್ರಾಯಗಳಿದ್ದರೂ, ನಾವೆಲ್ಲಾ ಮಿತ್ರರು ಎನ್ನುವುದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ನಿರೂಪಿಸಿದ್ದಾರೆ. ರಾಜಕೀಯ ವೇದಿಕೆಗಳಲ್ಲಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುವ ಬಿ.ಎಸ್.ಯಡಿಯೂರಪ್ಪ , ಇಂದು ನಿಖಿಲ್ ಕುಮಾರಸ್ವಾಮಿ ಅವರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿದ್ದರು. ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ನಲ್ಲಿ ನಡೆದ ಎಂಗೇಜ್ ಮೆಂಟ್ ಗೆ ಸಿಎo ಯಡಿಯೂರಪ್ಪ, ಸಚಿವ ಆರ್.ಅಶೋಕ್, ಜಗದೀಶ್ ಶೆಟ್ಟರ್ ಸೇರಿದಂತೆ ರಾಜ್ಯ ಸರ್ಕಾರದ ದೊಡ್ಡ ದಂಡೆ ತೆರಳಿ ನಿಖಿಲ್ ಅವರಿಗೆ ಶುಭಕೋರಿದ್ದಾರೆ. ನಂತರ ಕುಮಾರಸ್ವಾಮಿ ಅವರ ಜೊತೆ ನಿಂತು ಒಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ವೇಳೆ ಸಿಎಂ ಬಿಎಸ್‌ವೈ ನಿಖಿಲ್ ಜೊತೆ ಅನ್ಯೋನ್ಯವಾಗಿ ಮಾತನಾಡುತ್ತಿರುವುದು ಕಂಡುಬಂತು. ಅಲ್ಲದೆ ಕುಮಾರಸ್ವಾಮಿ ಬಿಎಸ್‌ವೈರ ಕೈಹಿಡಿದು ನಿಶ್ಚಿತಾರ್ಥಕ್ಕೆ ಬಂದಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.s
fifawordcup-2026: ಈತ ಬರೀ ಫುಟ್‍ಬಾಲ್ ಆಟಗಾರನಲ್ಲ.. ಸಾವಿರಾರು ಬಡ ಪ್ರತಿಭೆಗಳಿಗೆ ಬೆಳಕು ನೀಡೋ ನಂದಾದೀಪ..!
ಬಡತನ ಅವನ ಕಾಲಿಗೆ ಬೂಟ್‍ಗಳನ್ನು ಕೊಡಲಿಲ್ಲ. ಆದ್ರೆ ಹೃದಯಕ್ಕೆ ಧೈರ್ಯ ಕೊಟ್ಟಿತ್ತು. ಹಸಿವು ಆತನ ಹೊಟ್ಟೆಯನ್ನು ಸುಡುವಂತೆ ಮಾಡಿತ್ತು. ಆದ್ರೆ ಕಂಡ ಕನಸುಗಳನ್ನು ಸುಡಲಿಲ್ಲ. ಹೊಟ್ಟೆ ತುಂಬಾ...








