ಕಲಬುರ್ಗಿ : ಶಿವಮೊಗ್ಗದಲ್ಲಿ ಸತ್ತ ಹರ್ಷನ ಕುಟುಂಬಕ್ಕೆ ಸರಕಾರ 25 ಲಕ್ಷ ಕೊಟ್ಟಿದೆ. ಆದ್ರೆ ಉಕ್ರೇನ್ ನಲ್ಲಿ ಸತ್ತ ಯುವಕನ ಕುಟುಂಬಕ್ಕೆ ಏನ್ ಕೊಟ್ಟಿದೆ ಎಂದು ಕಲಬುರಗಿಯಲ್ಲಿ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಪ್ರಶ್ನೆ ಮಾಡಿದ್ದಾರೆ.
ಒಬ್ಬ ಎಂ.ಎಲ್.ಎ ಹೇಳ್ತಾ ಹೆಣ ತರೋಕೆ ಜಾಗ ಇಲ್ಲ ಫ್ಲೈಟ್ ನಲ್ಲಿ ಅಂತ. ಏನ್ ಬೇಜವಾಬ್ದಾರಿ ಮಾತಾಡ್ತಾರ್ರಿ ಇವರು. ನರಗುಂದದನಲ್ಲಿ ಒಬ್ಬ ಮುಸ್ಲಿಂ ಹುಡುಗನ್ನ ಭಜರಂಗ ದಳದವರು ಕೊಂದಿದ್ದಾರೆ. ಆ ಮುಸ್ಲಿಂ ಹುಡುಗನಿಗೆ ಸರಕಾರ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ.
ದೇಶ ಕಾಯುವ ಯೋಧ ಹುತಾತ್ಮರಾದ್ರೂ ಆತ ಮುಸಲ್ಮಾನ ಅನ್ನೋ ಕಾರಣಕ್ಕೆ ನಯಾಪೈಸೆ ಕೊಡಲ್ಲ ಈ ಸರಕಾರ. ಇದು ನ್ಯಾಯ ಏನ್ರಿ ಬಸವರಾಜ್ ಬೊಮ್ಮಾಯಿ ಎಂದು ಪ್ರಶ್ನೆ ಮಾಡಿದ್ದಾರೆ..
ಅಲ್ಲದೇ ಇದರ ಶಾಪ ನಿಮ್ಮ ಮಕ್ಕಳಿಗೆ ತಟ್ಟದೇ ಇರುತ್ತಾ ಬೊಮ್ಮಾಯಿ ಅವರೇ ಎಂದು ಸಿಎಂ ವಿರುದ್ದ ಸಿಎಂ ಇಬ್ರಾಹಿಂ ಆಕ್ರೋಶ ಹೊರಹಾಕಿದ್ದಾರೆ.