Mantralaya: ಸಿ.ಎಂ ಇಬ್ರಾಹಿಂ ಅವರೂ ರಾಯರ ಭಕ್ತರೇ : ಸುಭುದೇಂದ್ರ ತೀರ್ಥ ಸ್ವಾಮೀಜಿ

1 min read
Subhendra Teertha Swamiji Saaksha Tv

ಸಿ.ಎಂ ಇಬ್ರಾಹಿಂ ಅವರೂ ರಾಯರ ಭಕ್ತರೇ : ಸುಭುದೇಂದ್ರ ತೀರ್ಥ ಸ್ವಾಮೀಜಿ

ರಾಯಚೂರು: ಸಿ.ಎಂ ಇಬ್ರಾಹಿಂ ಅವರೂ ರಾಯರ ಭಕ್ತರೇ ಆಗಿದ್ದಾರೆ. ಅವರು ನಿಜವಾಗಿ ಏನು ಮಾತನಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಬೃಂದಾವನ ತೆಗೆಯಬೇಕು ಎನ್ನುವಂತೆ ಅವರು ಮಾತನಾಡಿಲ್ಲ ಎಂದು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಕಾಂಗ್ರೆಸ್ ನಾಯಕ್ ಸಿ.ಎಂ ಇಬ್ರಾಹಿಂ ಮಂತ್ರಾಲಯ ಮಠಕ್ಕೆ ಸಾಬ್ರು ಜಾಗ ಕೊಟ್ಟಿದ್ದು, ಬೇಡ ಅಂದರೆ ಆ ಜಾಗ ಕೊಟ್ಟು ಹೋಗಿ  ವಿವಾದಾತ್ಮಕ ಹೇಳಿಕೆ ನೀಡಿದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿ.ಎಂ.ಇಬ್ರಾಹಿಂ ವಿಧರ್ಮೀಯರು ಇರಬಹುದು, ಅವರೂ ರಾಯರ ಭಕ್ತರೇ ಆಗಿದ್ದಾರೆ ಬೃಂದಾವನ ತೆಗಿತಾರಾ ಎನ್ನುವ ರೀತಿ ಮಾತನಾಡಿಲ್ಲವೆಂದು ಮಾಧ್ಯಮಗಳಲ್ಲಿ ಅವರ ಹೇಳಿಕೆ ಗಮನಿಸಿದವರು ಹೇಳಿದ್ದಾರೆ ಎಂದು ತಿಳಿಸಿದರು.

CM Ibrahim Saaksha Tv

ಅಲ್ಲದೇ ಅವರು ಪ್ರಚೋದನಾಕಾರಿ ಮಾತುಗಳನ್ನು ಆಡಿರಲಿಕ್ಕಿಲ್ಲ ಎಂದು ಭಾವಿಸುತ್ತೇನೆ. ರಾಘವೇಂದ್ರ ಸ್ವಾಮಿಗಳೊಂದಿಗೆ ಸಿದ್ಧಿ ಮಸೂದ್ ಖಾನ್ ಅತ್ಯಂತ ಆತ್ಮೀಯತೆ ಹೊಂದಿದ್ದರು. ರಾಯರ ಮಹತ್ವ ಕಂಡು ಆ ಕ್ಷೇತ್ರವನ್ನು ಜಹಗೀರಾಗಿ ಕೊಟ್ಟಿದ್ದರು. ಅದಕ್ಕೂ ಮೊದಲು ಮಂತ್ರಾಲಯ ಎನ್ನುವುದು ನಮ್ಮ ಮಠಕ್ಕೆ ನಡೆದುಕೊಳ್ಳುತ್ತಿದ್ದ ಗ್ರಾಮವೇ ಆಗಿತ್ತು ಎಂದು ವಿಶ್ಲೇಷಿಸಿದರು.

ಇನ್ನೀ ಹಲಾಟ್ ಕಟ್ ಕುರಿತು ಮಾತನಾಡಿದ ಶ್ರೀಗಳು ಹಲಾಟ್ ಕಟ್  ಎನ್ನುವುದು ಹಿಂದೂಗಳ ಆಚಾರಲ್ಲ. ಮುಸ್ಲಿಮರ ಧಾರ್ಮಿಕ ಆಚರಣೆಗೆ ಅನುಗುಣವಾಗಿರುವ ಪದ್ಧತಿ. ಈ ಪದ್ಧತಿಯನ್ನು ಏಕೆ ಅನುಸರಿಸುತ್ತಿದ್ದಾರೆ ಮತ್ತು ಏಕೆ ನಿಷೇಧಿಸುತ್ತಾರೆ ಎನ್ನುವ ಕುರಿತು ನನಗೆ ಸಂಪೂರ್ಣ ಮಾಹಿತಿಯಿಲ್ಲ. ಈ ಬಗ್ಗೆ ಆಯಾ ಮತಗಳವರಿಂದ ಸ್ಪಷ್ಟನೆ ಪಡೆದುಕೊಳ್ಳಬೇಕಿದೆ ಎಂದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd