ದೀಪಾವಳಿ ಹಬ್ಬಕ್ಕೆ ಹೋಳಿ ಹಬ್ಬದ ಶುಭಾಶಯ ಕೋರಿದ ಸಿ ಎಂ
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಸೈಯದ್ ಮುರಾದ್ ಅಲಿ ಶಾ ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಂಧ್‌ನ ಹಿಂದೂ ಅಲ್ಪಸಂಖ್ಯಾತರಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ.
ಸಿಂಧ್ ಮುಖ್ಯಮಂತ್ರಿಯ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ತಪ್ಪು ಸಂದೇಶವನ್ನು ನಂತರ ಅಳಿಸಲಾಗಿದೆ. ಆದರೆ ಅದನ್ನು ಅಳಿಸುವ ಹೊತ್ತಿಗೆ ಅದು ವೈರಲ್ ಆಗಿದ್ದು, ಅನೇಕ ಬಳಕೆದಾರರು ಪೋಸ್ಟ್‌ನ ಸ್ಕ್ರೀನ್‌ಶಾಟ್ ತೆಗೆದುಕೊಂಡು ಇಂತಹ ತಪ್ಪು ಮಾಡಿದ ಸರ್ಕಾರದ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದಾರೆ. ಟ್ವಿಟರ್ ಹ್ಯಾಂಡಲ್ ‘ಹೋಳಿ ಶುಭಾಶಯ’ ಟಿಪ್ಪಣಿಯೊಂದಿಗೆ ಹಿನ್ನೆಲೆ ಬಣ್ಣದೊಂದಿಗೆ ಸಿಎಂ ಚಿತ್ರವನ್ನು ಹಂಚಿಕೊಂಡಿದೆ.

“ಪಾಕಿಸ್ತಾನದಲ್ಲಿ ಸಿಂಧ್ ಅತಿಹೆಚ್ಚು ಸಂಖ್ಯೆಯ ಹಿಂದೂ ಜನಸಂಖ್ಯೆಯನ್ನು ಹೊಂದಿದೆ, ಅಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಿಎಂ ಭವನದ ಸಿಬ್ಬಂದಿಗೆ ದೀಪಾವಳಿ ಮತ್ತು ಹೋಳಿ ನಡುವಿನ ವ್ಯತ್ಯಾಸ ತಿಳಿಯದಿರುವುದು ನಿಜಕ್ಕೂ ಖೇದಕರ… ನಿಜಕ್ಕೂ ದುಃಖವಾಗಿದೆ, ಸ್ಥಳಿಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಅಫ್ಘಾನಿಸ್ತಾನದ ಕೈಯಲ್ಲಿ ಟೀಮ್ ಇಂಡಿಯಾದ ಭವಿಷ್ಯ, ನಮಿಬಿಯಾ ವಿರುದ್ಧ ಗೆದ್ದರೂ ಸೋಲಬೇಕು ನ್ಯೂಜಿಲೆಂಡ್..!








