ಉತ್ತಮ ಆರೋಗ್ಯದ ಗುಟ್ಟು ತೆಂಗಿನಕಾಯಿ ಹಾಲು
ಹಾಲು ಮನುಷ್ಯನ ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡುವಲ್ಲಿ ಸಹಕಾರಿ. ಹಾಲು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದೆ. ಇದರಿಂದಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಅದೇ ರೀತಿಯಲ್ಲಿ ಹಾಲಿನ ಹಾಗೆ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವಂತಹ ಈ ಹಾಲು ನೀವೂ ಕೂಡ ತಿಳಿದರೆ ಇದನ್ನು ಪ್ರತಿದಿನ ಸೇವಿಸಲು ಇಚ್ಛಿಸುತ್ತೀರಾ ಅದೇ ತೆಂಗಿನಕಾಯಿಯ ಹಾಲು.
ಈ ತೆಂಗಿನಕಾಯಿಯ ಹಾಲನ್ನು ನಾವು ಹಬ್ಬ ಹರಿದಿನಗಳಲ್ಲಿ ಸಿಹಿ ಜೊತೆ ಸೇವಿಸುತ್ತೇವೆ ಮತ್ತು ಪ್ರತಿದಿನದ ಅಡುಗೆ ಅಲ್ಲಿ ಕೂಡ ತೆಂಗಿನಕಾಯಿ ಅನ್ನು ಬಳಕೆ ಮಾಡುತ್ತೇವೆ. ಇದರ ಅರ್ಥ ಅಂದರೆ ನಮ್ಮ ದೇಹಕ್ಕೆ ಕೆಲವೊಂದು ಉತ್ತಮವಾದ ಮುಖ್ಯವಾದ ಪೋಷಕಾಂಶಗಳನ್ನು ಒದಗಿಸಿಕೊಡುವಲ್ಲಿ ಈ ತೆಂಗಿನ ಕಾಯಿಯ ಹಾಲು ಅಥವಾ ತೆಂಗಿನಕಾಯಿ ಸಹಕಾರಿಯಾಗಿದೆ.
ಈ ಕಾರಣದಿಂದಲೆ ಸಾಕಷ್ಟು ಆಹಾರ ಪದಾರ್ಥಗಳಲ್ಲಿ ತೆಂಗಿನ ಕಾಯಿಯ ಬಳಕೆ ಮಾಡಲಾಗುತ್ತಿದೆ ಇವತ್ತಿನ ಮಾಹಿತಿಯಲ್ಲಿ ತೆಂಗಿನಕಾಯಿಯ ಹಾಲಿನ ಬಗೆಗಿನ ಉಪಯುಕ್ತ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿಸಿ ಕೊಡುತ್ತೇವೆ. ನೀವು ಕೂಡ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಮತ್ತು ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಉಂಟಾಗ ಬಾರದೆಂದೆರೆ, ತೆಂಗಿನಕಾಯಿಯ ಹಾಲನ್ನು ಪ್ರತಿ ದಿನ ಒಂದು ಚಿಕ್ಕ ಲೋಟದಲ್ಲಿ ಸೇವನೆ ಮಾಡಿಕೊಂಡು ಬನ್ನಿ ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಯಾವೆಲ್ಲ ಆರೋಗ್ಯಕರ ಲಾಭಗಳು ದೊರೆಯುತ್ತವೆ ಎಂಬುದನ್ನು ಕೆಳಗಿನ ಮಾಹಿತಿಯಲ್ಲಿ ಸಂಕ್ಷಿಪ್ತವಾಗಿ ತಿಳಿಯೋಣ.
ಮಲಬದ್ಧತೆ ನಿವಾರಣೆ : ನೀವೇನಾದರೂ ಬೆಳಗಿನ ಸಮಯದಲ್ಲಿ ತೆಂಗಿನಕಾಯಿಯ ಹಾಲನ್ನು ಕುಡಿಯುವ ರೂಢಿಯನ್ನು ಮಾಡಿಕೊಂಡರೆ ಇದರಿಂದ ಹೊಟ್ಟೆ ಸ್ವಚ್ಛವಾಗುತ್ತದೆ ಮತ್ತು ಅಜೀರ್ಣತೆ ನಿವಾರಣೆ ಆಗಿ ಮಲಬದ್ಧತೆ ಸಮಸ್ಯೆ ಬರದೇ ಇರುವ ಹಾಗೆ ಆರೋಗ್ಯವನ್ನು ರಕ್ಷಿಸುತ್ತದೆ. ತೆಂಗಿನಕಾಯಿಯ ಹಾಲಿನಲ್ಲಿ ನಾರಿನಂಶ ಇನ್ನಷ್ಟು ಜೀವಸತ್ವಗಳು ಖನಿಜಾಂಶಗಳು ಇರುವ ಕಾರಣ ಇದು ಜೀರ್ಣಶಕ್ತಿಯನ್ನು ಮೆಟಬಾಲಿಸಮ್ ರೇಟ್ ಅನ್ನು ಹೆಚ್ಚು ಮಾಡುತ್ತದೆ.
ತ್ವಚೆಯ ಆರೋಗ್ಯಕ್ಕೆ ಉತ್ತಮ : ತೆಂಗಿನಕಾಯಿಯ ಹಾಲಿನಲ್ಲಿ ಇರುವ ಉತ್ತಮ ಜೀವಸತ್ವಗಳು ಉತ್ತಮ ಪೋಷಕಾಂಶಗಳು ಚರ್ಮಕ್ಕೆ ಕಾಂತಿಯನ್ನು ನೀಡುತ್ತದೆ ಚರ್ಮದ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ. ಈ ಕಾರಣದಿಂದಾಗಿ ಪ್ರತಿ ದಿನ ತೆಂಗಿನಕಾಯಿಯ ಹಾಲನ್ನು ಸೇವನೆ ಮಾಡುವುದು ಮತ್ತು ತೆಂಗಿನಕಾಯಿ ಹಾಲನ್ನು ತ್ವಚೆಗೆ ಲೇಪನ ಮಾಡಿಕೊಳ್ಳುವುದರಿಂದ ಕೂಡ, ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಕಾಂತಿಯುತವಾದ ತ್ವಚೆ ಪಡೆದುಕೊಳ್ಳಬಹುದು.
ಸಕ್ಕರೆ ಕಾಯಿಲೆ ಮತ್ತು ರಕ್ತದ ಒತ್ತಡ ತೆಯನ್ನು ದೂರ ಇಡಬಹುದು: ಸಕ್ಕರೆ ಕಾಯಿಲೆಯಿಂದ ಬಳಲುತ್ತಾ ಇರುವವರು ಅಥವಾ ಸಕ್ಕರೆ ಕಾಯಿಲೆ ಬಾರದೇ ಇರುವ ಹಾಗೆ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಪ್ರತಿದಿನ ಈ ತೆಂಗಿನ ಹಾಲನ್ನು ಸೇವಿಸಬಹುದು ಇನ್ನು ರಕ್ತದ ಒತ್ತಡ ಬಾರದಿರುವ ಹಾಗೆ ಕೂಡ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ ತೆಂಗಿನಕಾಯಿಯ ಹಾಲು.
ಮೂಳೆಗಳ ಆರೋಗ್ಯ ವೃದ್ಧಿಗಾಗಿ: ತೆಂಗಿನ ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಪೊಟಾಶಿಯಂ ಅಂಶವು ಇದ್ದು ಇದರ ಜೊತೆಗೆ ಫಾಸ್ಫರಸ್ ಅಂಶ ಕೂಡ ಇದ್ದು ತೆಂಗಿನಕಾಯಿಯ ಹಾಲನ್ನು ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಈ ರೀತಿಯಾಗಿ ತೆಂಗಿನಕಾಯಿಯ ಹಾಲನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ ಶುದ್ಧವಾದ ತೆಂಗಿನಕಾಯಿಯ ಹಾಲನ್ನು ಮನೆಯಲ್ಲಿಯೆ ತಯಾರಿಸಿಕೊಂಡು ಪ್ರತಿದಿನ ಕುಡಿಯುತ್ತಾ ಬಂದರೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ತೆಂಗಿನಕಾಯಿಯ ಹಾಲಿನಲ್ಲಿ ಲಾರಿಕ್ ಅಂಶ ಇದೆ ಇದರ ಜೊತೆಗೆ ನಾರಿನಂಶ ಉತ್ತಮ ಜೀವಸತ್ವ ಖನಿಜಾಂಶಗಳನ್ನು ಉತ್ತಮ ಪೋಷಕಾಂಶಗಳು ಇರುವ ಕಾರಣ ಹೃದಯಕ್ಕೂ ಕೂಡ ಒಳ್ಳೆಯದು ತೆಂಗಿನ ಹಾಲು.
-ದೇವಿಕಾ
ಕೃಷಕರು, ಮೈಸೂರು
ಚಿತ್ರ ಕೃಪೆ: ಅಂತರ್ಜಾಲ ಗೂಗಲ್