ಬೆಂಗಳೂರು: ದೇಶಾದ್ಯಂತ ಇಂದು ಕಾಮೆಡ್-ಕೆ (COMEDK) ಪರೀಕ್ಷೆ ನಡೆಯುತ್ತಿದೆ.
ಬೆಂಗಳೂರು (Bengaluru) ಸೇರಿದಂತೆ ದೇಶದ 182 ನಗರಗಳ 264 ಕೇಂದ್ರಗಳಲ್ಲಿ ಈ ಪರೀಕ್ಷೆ ಜರುಗುತ್ತಿವೆ. ಈ ಪರೀಕ್ಷೆ ಒಂದೇ ದಿನ ನಡೆಯಲಿದೆ. 3 ಅವಧಿಗಳಲ್ಲಿ ಈ ಪರೀಕ್ಷೆ ನಡೆಯಲಿದೆ. ಸುಮಾರು 1.18 ಲಕ್ಷ ವಿದ್ಯಾರ್ಥಿಗಳು (Students) ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.
ಪರೀಕ್ಷೆಯು ಬೆಳಗ್ಗೆ 8.30ರಿಂದ 11.30, ಎರಡನೇ ಅವಧಿಯಲ್ಲಿ ಮಧ್ಯಾಹ್ನ 1ರಿಂದ 4 ಗಂಟೆ ಹಾಗೂ ಮೂರನೇ ಅವಧಿಯಲ್ಲಿ ಸಂಜೆ 5.30ರಿಂದ 8.30ರ ವರೆಗೆ ಹೀಗೆ ಮೂರು ಸೆಷನ್ ಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ಅಭ್ಯರ್ಥಿಗಳು ಪ್ರವೇಶ ಪತ್ರದೊಂದಿಗೆ ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವಂತೆ ಕಾಮೆಡ್-ಕೆ ಪ್ರಕಟಣೆ ಹೇಳಿದೆ. ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಡೀಮ್ಡ್ ವಿವಿಗಳಲ್ಲಿ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಾತಿಗೆ ಈ ಪರೀಕ್ಷೆ ನಡೆಸಲಾಗುತ್ತದೆ.