ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.
ರಾಹುಲ್ ಗಾಂಧಿ, “ನಾವು ರಾಜಕೀಯ ಪಕ್ಷದ ವಿರುದ್ಧ ಹೋರಾಡುತ್ತಿಲ್ಲ. ನರೇಂದ್ರ ಮೋದಿ ವಿರುದ್ಧ ಹೋರಾಡುತ್ತಿಲ್ಲ. ಒಬ್ಬ ವ್ಯಕ್ತಿಯ ವಿರುದ್ಧ ಹೋರಾಡುತ್ತಿಲ್ಲ. ಆದರೆ, ಒಂದು ಮುಖವನ್ನು ಮುಂಚೂಣಿಯಲ್ಲಿ ಬಿಂಬಿಸಲಾಗಿದೆ. ಹಿಂದೂ ಧರ್ಮದಲ್ಲಿ ‘ಶಕ್ತಿ’ ಎಂಬ ಪದವಿದೆ. ನಾವು ಆ ಶಕ್ತಿ ವಿರುದ್ಧ ಹೋರಾಡುತ್ತಿದ್ದೇವೆ. ಆ ಶಕ್ತಿ ಯಾವುದು ಎಂದು ಉದ್ಭವಿಸುತ್ತದೆ ಎಂದು ಹೇಳಿದ್ದರು.
ದೂರು ನೀಡಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ರಾಹುಲ್ ಗಾಂಧಿ ಹೇಳಿಕೆಗಳನ್ನು ಓದಿದ್ದೇನೆ. ಈ ಕುರಿತು ವಿಸ್ತೃತವಾಗಿ ಚುನಾವಣಾ ಸಮಿತಿ ಮುಂದೆ ಹೇಳಿದ್ದೇನೆ ಎಂದು ಹೇಳಿದ್ದಾರೆ. ಅವರು ಹೇಳಿದ್ದನ್ನು ನಾನು ನಿಖರವಾಗಿ ಓದಿದ್ದೇನೆ. ಬಹಳಷ್ಟು ಜನರ ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ್ದಾರೆ. ಅವರು ‘ನಾರಿ ಶಕ್ತಿ’ಯನ್ನು ಅವಮಾನಿಸಿದ್ದಾರೆ ಎಂದು ಹೇಳಿದ್ದಾರೆ.