ಪುಣೆ: ಸಲಿಂಗಿಯಾಗಿದ್ದರೂ ವಿಚಾರವನ್ನು ಮರೆಮಾಚಿ ಮದುವೆಯಾಗಿದ್ದಾನೆ ಎಂದು ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆಯ ವಿರುದ್ಧ ದೂರು ದಾಖಲಿಸಿರುವ ಘಟನೆ ನಡೆದಿದೆ.
ಈ ಘಟನೆ ಪುಣೆಯ ವಡ್ಗಾಂಶೇರಿ ಎಂಬಲ್ಲಿ ನಡೆದಿದೆ. ದೂರು ನೀಡಿದ ಮಹಿಳೆಯ ವಿವಾಹ 2022ರಲ್ಲಿಯೇ ನಡೆದಿತ್ತು. ಮದುವೆಯ ನಂತರ ಪತಿ ಸಲಿಂಗಿ ಎಂಬುವುದು ಮಹಿಳೆಗೆ ಗೊತ್ತಾಗಿದೆ. ಇದನ್ನು ಮಹಿಳೆಯು ಪತಿ ಹಾಗೂ ಅತ್ತೆಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಕೋಪಗೊಂಡ ಅತ್ತೆ ಹಾಗೂ ಪತಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ. ಕಾರು ಮತ್ತು ಹಣಕ್ಕೆ ಬೇಡಿಕೆ ಇಟ್ಟು ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಈ ಕುರಿತು ಪುಣೆಯ ಚಂದನ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಪತಿ, ಅತ್ತೆ ಮತ್ತು ಮಾವನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.