Madhya Pradesh : ಶಾಲಾ ತಪಾಸಣೆ ವೇಳೆ ಕಾಂಡೋಮ್, ವಿದೇಶಿ ಮದ್ಯ ಪತ್ತೆ; ಮುಖ್ಯೋಪಾಧ್ಯಾಯರ ವಿರುದ್ಧ ದೂರು ದಾಖಲು…
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಮಕ್ಕಳ ಹಕ್ಕು ರಕ್ಷಣಾ ಆಯೋಗ ನಡೆಸಿದ ಹಠಾತ್ ತಪಾಸಣೆಯ ವೇಳೆ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಕಾಂಡೋಮ್ ಪ್ಯಾಕೆಟ್‌ಗಳು, ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಾಲೆಯ ಮುಖ್ಯೋಪಾಧ್ಯಾಯರ ಬರುವ ಕೋಠಡಿಯಲ್ಲಿ ಆಕ್ಷೇಪಾರ್ಹ ಸಾಮಾಗ್ರಿಗಳು ಪತ್ತೆಯಾಗಿವೆ.
ಮಕ್ಕಳ ಹಕ್ಕು ರಕ್ಷಣಾ ಆಯೋಗ ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಎ ಕೆ ಪಾಠಕ್ ಅವರು ಶಾಲೆಯಲ್ಲಿ ದಿಢೀರ್ ತಪಾಸಣೆ ನಡೆಸಿದರು. ಮಕ್ಕಳ ಹಕ್ಕು ಸಂರಕ್ಷಣಾ ಸಮಿತಿಯ ಸದಸ್ಯೆ ಡಾ ನಿವೇದಿತಾ ಶರ್ಮಾ ಅವರು ಶಾಲೆಯ ಗ್ರಂಥಾಲಯದಲ್ಲಿ ನಿರ್ದಿಷ್ಟ ಧರ್ಮದ ಕೆಲವು ಪ್ರಚಾರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಎಎನ್‌ಐನಲ್ಲಿ ವರದಿಯಾಗಿದೆ.
ಆಯೋಗವು ಶಾಲೆಯನ್ನು ವಶಪಡಿಸಿಕೊಳ್ಳಲು ಮೊರೆನಾ ಕಲೆಕ್ಟರ್‌ಗೆ ಶಿಫಾರಸು ಮಾಡಿದ್ದಾರೆ. ವಿದೇಶಿ ಮದ್ಯದ ಬಾಟಲಿಗಳು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯಿಂದ ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. “ಇದು ಕಾನೂನಿನ ಉಲ್ಲಂಘನೆಯಾಗಿದೆ. ಅಬಕಾರಿ ಇಲಾಖೆಯು ಈ ವಿಷಯದ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿದೆ, ಏಕೆಂದರೆ ಯಾರೂ ಇಷ್ಟು ಪ್ರಮಾಣದ ಮದ್ಯವನ್ನು ಇಟ್ಟುಕೊಳ್ಳಬಾರದು ಎಂಬುದು ಕಾನೂನು. ಕಾಂಡೋಮ್ಗಳು ಸೇರಿದಂತೆ ಇತರ ಕೆಲವು ಆಕ್ಷೇಪಾರ್ಹ ವಸ್ತುಗಳು ಸಹ ಕಂಡುಬಂದಿವೆ” ಎಂದು ನಿವೇದಿತಾ ಶರ್ಮಾ ಹೇಳಿದ್ದಾರೆ.
Condom packets, liquor bottles recovered from principal’s room during inspection at school in Madhya Pradesh