ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕಂಡಕ್ಟರ್‍ಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಸೋಂಕಿತನ ಪತ್ನಿ ಹಾಗೂ ಪುತ್ರ ಕಣ್ಣೀರು ಹಾಕಿದ ಘಟನೆ ನಡೆದಿದೆ.
ತಮ್ಮ ಪತಿ ಸಕ್ಕರೆ ಕಾಯಿಲೆ ಹಿನ್ನೆಲೆಯಲ್ಲಿ ತೀವ್ರ ತೊಂದರೆಯಲ್ಲಿದ್ದಾರೆ. ಸೂಕ್ತ ಚಿಕಿತ್ಸೆ ಕೊಡುತ್ತಿಲ್ಲ ಎಂದು ವಿಡಿಯೋ ಕಾಲ್ ಮಾಡಿ ಕಣ್ಣೀರಿಡುತ್ತಿದ್ದಾರೆ. ಡಾಕ್ಟರ್ ದೇವರು ಎಂದು ನಂಬಿ ಬಂದಿದ್ದೇವೆ. ಅವ್ರೇ ನೋಡ್ಲಿಲ್ಲ ಅಂದ್ರೆ ಯಾರು ನೋಡ್ಬೇಕು ಎಂದು ಸೋಂಕಿತನ ಪತ್ನಿ ಬಾಗಲಕೋಟೆ ಜಿಲ್ಲಾಸ್ಪತ್ರೆ ಎದುರು ಕಣ್ಣೀರು ಹಾಕಿ ಅಳಲು ತೋಡಿಕೊಂಡಿದ್ದಾರೆ.
ಮೂಲತಃ ಕಲಬುರ್ಗಿಯವರಾದ ಕಂಡಕ್ಟರ್, ಮುಧೋಳದಲ್ಲಿ ಬಸ್ ಕಂಡಕ್ಟರ್ ಸೇವೆ ಸಲ್ಲಿಸುತ್ತಿದ್ದ ವೇಳೆ ಕೊರೊನಾ ಸೋಂಕು ತಗುಲಿದೆ. ಎರಡು ದಿನದ ಹಿಂದೆ ಆಸ್ಪತ್ರೆಗೆ ಕರೆದುಕೊಂಡು ಬಂದರೆ ದಾಖಲಿಸಿಕೊಳ್ಳದೆ ಮಳೆಯಲ್ಲೇ ಹೊರಗೆ ಮಲಗಿಕೊಂಡಿದ್ರು.
ನನ್ನ ಗಂಡ ಈಗ ಸಾಯ್ತಿನಿ ಎನ್ನುತ್ತಿದ್ದಾರೆ. ಬೇರೆ ಆಸ್ಪತ್ರೆಂಗಳಲ್ಲಿ ಬೆಡ್ ಇಲ್ಲ ಎಂದು ಅಡ್ಮಿಟ್ ಮಾಡಿಕೊಳ್ಳುತ್ತಿಲ್ಲ. ಉಸಿರಾಟದ ತೊಂದರೆ ಇದ್ದರೂ ವೆಂಟಿಲೇಟರ್ ಹಾಕಿಲ್ಲ. ಬರೀ ಗುಳಿಗೆ ಕೊಟ್ಟಿದ್ದಾರೆ, ಸೂಕ್ತ ಚಿಕಿತ್ಸೆ ಕೊಡ್ತಿಲ್ಲ ಎಂದು ಸೋಂಕಿತನ ಪತ್ನಿ ಅಳಲು ತೋಡಿಕೊಂಡಿದ್ದಾರೆ.
Astrology : 5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ…
5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ... ನಮ್ಮ ಅಡುಗೆಮನೆಯಲ್ಲಿ ನೂರಾರು ವಸ್ತುಗಳು ಇವೆ....