ರಾಹುಲ್ ಗಾಂಧಿಯವರೇ ನಿಮಗೆ ಅಭಿನಂದನೆ… ನೀವು ಚೀನಾ – ಪಾಕ್ ಗೆ ಹೀರೋ, ಭಾರತಕ್ಕೆ ಝೀರೋ
ಹೊಸದಿಲ್ಲಿ, ಸೆಪ್ಟೆಂಬರ್08: ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ನಡೆಸಿದ್ದು, ನೀವು ಮೊದಲು ಪಾಕಿಸ್ತಾನಕ್ಕೆ ಹೀರೋ ಆಗಿದ್ರಿ, ಈಗ ಚೀನಾಕ್ಕೂ ಹೀರೋ ಆಗಿಬಿಟ್ರಿ. ಆದರೆ ಭಾರತಕ್ಕೆ ಮಾತ್ರ ದೊಡ್ಡ ಝೀರೋ ಎಂದು ಲೇವಡಿ ಮಾಡಿದ್ದಾರೆ.
ಚೀನಾದ ಗ್ಲೋಬಲ್ ಟೈಮ್ಸ್, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಚೀನಾದೊಂದಿಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ತೀವ್ರ ಒತ್ತಡಕ್ಕೆ ಒಳಗಾಗಿದೆ. ವಿರೋಧ ಪಕ್ಷ ಕಾಂಗ್ರೆಸ್, ದೇಶೀಯ ಆಡಳಿತ ವೈಫಲ್ಯ, ಅಪಾಯಕಾರಿ ವಿದೇಶಾಂಗ ನೀತಿಯನ್ನು ವಿರೋಧಿಸುತ್ತಿದ್ದು, ಬಿಜೆಪಿ ಆಡಳಿತವನ್ನು ಅಲುಗಾಡಿಸುತ್ತಿದೆ ಎಂದು ಟ್ವೀಟ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅನ್ನು ಟೀಕಿಸಿರುವ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಪಾಕಿಸ್ತಾನಿ ಉಗ್ರರಿಗೆ, ಚೀನೀಯರಿಗೆ ಯಾವಾಗಲೂ ಕಾಂಗ್ರೆಸ್ ಫೆವರೇಟ್. ಕಾಂಗ್ರೆಸ್ ಭುಜದ ಮೇಲೇರಿ ಭಾರತದ ಮೇಲೆ ಅವುಗಳು ದಾಳಿ ನಡೆಸುತ್ತವೆ ಎಂದು ಖಾರವಾಗಿ ಟೀಕಿಸಿದ್ದು, ರಾಹುಲ್ ಗಾಂಧಿಯವರೇ ನಿಮಗೆ ಅಭಿನಂದನೆ.. ನೀವು ಶತ್ರು ರಾಷ್ಟ್ರ ಪಾಕಿಸ್ತಾನ ಮತ್ತು ಚೀನಾಕ್ಕೆ ಹೀರೋ ಆಗಿದ್ದೀರಿ. ಆದರೆ ಭಾರತದ ಪಾಲಿಗೆ ಮಾತ್ರ ಝೀರೋ ಎಂದು ಲೇವಡಿ ಮಾಡಿದ್ದಾರೆ.