Congress | ಭ್ರಷ್ಟಾಚಾರದ ಮಹಾಪೋಷಕ ಬಸವರಾಜ ಬೊಮ್ಮಾಯಿ
ಬೆಂಗಳೂರು : ಭ್ರಷ್ಟಾಚಾರದ ಮಹಾಪೋಷಕ ಬಸವರಾಜ ಬೊಮ್ಮಾಯಿ ಅವರಿಗೆ ಭ್ರಷ್ಟರ, ಸಮಾಜಘಾತುಕರ ವಿಷಯ ಬಂದಾಗ ದಮ್ಮು ಕೆಮ್ಮು ಬರುವುದೇ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ಕಿಡಿಕಾರಿದೆ.
ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ರಾಜ್ಯ ಕಾಂಗ್ರೆಸ್, ರೈತರು ಆತ್ಮಹತ್ಯೆಗೆ ಮುಂದಾಗಿದ್ದು ಬೆಳೆ ಕಳೆದುಕೊಂಡಿದ್ದಕ್ಕಲ್ಲ, ಈ ಸರ್ಕಾರದ ಮೇಲೆ ಭರವಸೆ ಕಳೆದುಕೊಂಡಿದ್ದಕ್ಕೆ. ರೈತರಿಗೆ #40PercentSarkara ಭರವಸೆ ತುಂಬುವ ಯಾವುದೇ ಕೆಲಸ ಮಾಡಿಲ್ಲ, ನೆರೆ ಪರಿಹಾರ ಕೊಡಲಿಲ್ಲ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನಕ್ಕೇರಿದ್ದು #PayCM ಅವರ ದಮ್ಮು ತಾಕತ್ತಿನ ಪ್ರತೀಕವೇ ಬಿಜೆಪಿ?

ಪೋಸ್ಟರ್ ಅಂಟಿಸುವುದು ಕೂಡ ಪ್ರತಿಭಟನೆ ವ್ಯಕ್ತಪಡಿಸುವ ಒಂದು ಮಾರ್ಗ, ಪ್ರತಿಭಟನೆಯ ಸ್ವತಂತ್ರ ಕಿತ್ತುಕೊಳ್ಳುವ ‘ಯುಪಿ ಮಾಡೆಲ್’ ಜಾರಿಯಾಗಿದೆಯೇ ರಾಜ್ಯದಲ್ಲಿ? ಮೋದಿಯವರಂತೆ ನಾನೂ ಸರ್ವಾಧಿಕಾರ ನಡೆಸೋಣ ಎಂದು ಹೊರಟಿದ್ದೀರಾ ಮಾನ್ಯ #PayCM ಅವರೇ? #40PercentSarkara ದಲ್ಲಿ ಭ್ರಷ್ಟಾಚಾರ ಕಾನೂನಾತ್ಮಕ, ಅದನ್ನು ಪ್ರಶ್ನೆ ಮಾಡುವುದು ಅಪರಾಧ!
ಮುಖ್ಯಮಂತ್ರಿಗೆ ಮಸಿ ಬಳಿಯುತ್ತೇವೆ ಎಂದಿದ್ದ ಶ್ರೀರಾಮಸೇನೆಯ ಪುಂಡನೊಬ್ಬನ ಹೇಳಿಕೆಯಿಂದ #PayCM ಗೆ ಅವಮಾನ ಆಗಲಿಲ್ಲವೇ? ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವ ಆತನ ವಿರುದ್ಧ ಕ್ರಮ ಕೈಗೊಳ್ಳಲು ತೊಡೆ ನಡುಗುತ್ತದೆಯೇ? ಭ್ರಷ್ಟಾಚಾರದ ಮಹಾಪೋಷಕ ಬಸವರಾಜ ಬೊಮ್ಮಾಯಿ ಅವರಿಗೆ ಭ್ರಷ್ಟರ, ಸಮಾಜಘಾತುಕರ ವಿಷಯ ಬಂದಾಗ ದಮ್ಮು ಕೆಮ್ಮು ಬರುವುದೇ ಎಂದು ಪ್ರಶ್ನಿಸಿದೆ.