Congress |ಮೊಟ್ಟೆಯ ಕಮಿಷನ್ನಂತೆ ಬಟ್ಟೆಯಲ್ಲೂ ಕಮಿಷನ್ ಲೂಟಿಯೇ ಬಿಜೆಪಿ?
ಬೆಂಗಳೂರು : ವಿದ್ಯಾರ್ಥಿಗಳ ಸಮವಸ್ತ್ರದಲ್ಲೂ 40% ಲೂಟಿ ಮಾಡಿಲಾಗಿದೆಯೇ ಬಿ.ಸಿ.ನಾಗೇಶ್ ಅವರೇ? ಸಮವಸ್ತ್ರ ಕೊಡುವುದೇ ವಿಳಂಬವಾಗಿದೆ, ಅದರಲ್ಲೂ ತೆಳುವಾದ ಕಳಪೆ ಬಟ್ಟೆಗಳನ್ನು ನೀಡಲಾಗಿದೆ. ಅರ್ಧ ವರ್ಷ ಕಳೆದಿದೆ, ಇನ್ನರ್ಧ ವರ್ಷ ಬಾಳಿಕೆ ಬಂದರೆ ಸಾಕು ಎಂಬ ಸರ್ಕಾರದ ಆಲೋಚನೆಯೇ? ಮೊಟ್ಟೆಯ ಕಮಿಷನ್ನಂತೆ, ಬಟ್ಟೆಯಲ್ಲೂ ಕಮಿಷನ್ ಲೂಟಿಯೇ ಬಿಜೆಪಿ ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ
ಟ್ವಿಟ್ಟರ್ ನಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ದಲಿತರ ಹಣದಲ್ಲೂ 40% ಲೂಟಿಯೇ ಬಸವರಾಜ ಬೊಮ್ಮಾಯಿ ಅವರೇ? #ದಲಿತವಿರೋಧಿಬಿಜೆಪಿ ಗೆ ದಲಿತರ ಏಳಿಗೆಯ ಬಗ್ಗೆ ಇರುವ ಅಪಾರ ಅಸಹನೆಯನ್ನು ದಲಿತರ ಪಾಲಿನ ಹಣವನ್ನು ದುರುಪಯೋಗ ಮಾಡುವ ಮೂಲಕ ತೀರಿಸಿಕೊಳ್ಳುತ್ತಿದೆ. ಬಿಜೆಪಿಯ ದಲಿತ ನಾಯಕರು ನಾಗಪುರದ ಆದೇಶದಂತೆ ಚಡ್ಡಿ ಹೊರಲು ಮಾತ್ರ ಸೀಮಿತವೇ, ಈ ಅನ್ಯಾಯವನ್ನು ಪ್ರಶ್ನಿಸುವುದಿಲ್ಲವೇ?
ರೈತರು ಮಳೆಯಿಂದ ಫಸಲು ರಕ್ಷಣೆ ಮಾಡಿಲು ಪರದಾಡುತ್ತಿದ್ದರೂ ಸರ್ಕಾರ ಟಾರ್ಪಲ್ ಕೊಡಲು ತಯಾರಾಗಿಲ್ಲ. ಬಿ.ಸಿ.ಪಾಟೀಲ್ ಅವರೇ, ರೈತರು ಹೇಡಿಗಳಲ್ಲ, ರೈತರಿಗೆ ಸವಲತ್ತು ಕೊಡದವರು ನಿಜವಾದ ಹೇಡಿಗಳು. ಟಾರ್ಪಲ್ ಸರಬರಾಜುದಾರರಿಗೆ ಅರ್ಜಿಯನ್ನೇ ಆಹ್ವಾನಿಸದಿರುವುದೇಕೆ ಸಚಿವರೇ, 40% ಕಮಿಷನ್ ವ್ಯವಹಾರ ಕುದುರಲಿಲ್ಲವೇ?
ಆಸ್ಪತ್ರೆಗಳಿಗೆ ವಿದ್ಯುತ್ ಕಡಿತಗೊಳ್ಳುತ್ತದೆ, ಕಳಪೆ ವೆಂಟಿಲೇಟರ್ಗಳು ಕೈಕೊಡುತ್ತಿವೆ, ಈಗ ಔಷಧ ಪೂರೈಕೆಯೂ ನಿಂತಿದೆ.ಸರ್ಕಾರಿ ಆಸ್ಪತ್ರೆಗಳ ಔಷಧ ಪೂರೈಕೆದಾರರಿಗೆ ಹಣ ಬಿಡುಗಡೆ ಮಾಡದ ಪರಿಣಾಮವಿದು. #40PercentSarkara ಇಷ್ಟೊಂದು ದಿವಳಿಯಾಗಿದೆಯೇ? ಡಾ.ಕೆ.ಸುಧಾಕರ್ ಎಂಬ ಅಸಮರ್ಥ ಸಚಿವರ ದುರಾಡಳಿತದಲ್ಲಿ ಜನ ಸಾವಿನ ಮನೆ ಸೇರುವಂತಾಗಿದೆ ಎಂದು ಆಕ್ರೋಶ ಹೊರಹಾಕಿದೆ.