Congress – ಬಿಜೆಪಿಯ ದಲಿತವಿರೋಧಿ ಮನಸ್ಥಿತಿ ಬದಲಾಗಿಲ್ಲ
ಬೆಂಗಳೂರು : ದೊಡ್ಡಗಣಪತಿ ದೇವಾಲಯಕ್ಕೆ ಬರುವ ಭಕ್ತರ ಪೂಜೆಗಳಿಗೆ ಅನುಕೂಲ ಆಗುವಂತೆ ಪೂಜಾ ಸಾಮಗ್ರಿ ಮಾರಾಟ ಮಾಡುವ ಸ್ಥಳದ ಹಕ್ಕು ಸಾಮಾನ್ಯ ವರ್ಗಕ್ಕೆ, ಈಡುಗಾಯಿ ಆಯ್ದುಕೊಳ್ಳುವ ಹಕ್ಕಿನ ಟೆಂಡರ್ ಸಾಮಾನ್ಯ ವರ್ಗಕ್ಕೆ ಎಳನೀರು ಮಾರಾಟ ಮಾಡುವ ಹಕ್ಕಿನ ಟೆಂಡರ್ ಸಾಮಾನ್ಯವರ್ಗಕ್ಕೆ ಮತ್ತು ಪಾದರಕ್ಷೆ ಕಾಯ್ದುಕೊಳ್ಳುವ ಹಕ್ಕಿನ ಟೆಂಡರ್ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಡಲಿರಿಸಲಾಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಇದೀಗ ಇದೇ ವಿಚಾರವಾಗಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ದೇವಸ್ಥಾನದಲ್ಲಿ ಚಪ್ಪಲಿ ಕಾಯುವ ಟೆಂಡರನ್ನು ದಲಿತರಿಗೆ ಮೀಸಲಿರಿಸುವ ಮೂಲಕ ಬಿಜೆಪಿ ಸರ್ಕಾರ ತನ್ನೊಳಗಿನ ಕೊಳಕಿನ ಮನುವಾದವನ್ನು ಜಾರಿಯಲ್ಲಿಡಲು ಯತ್ನಿಸಿದೆ.
ಜನಾಕ್ರೋಶದ ನಂತರ ಪ್ರಕಟಣೆ ಬದಲಾಗಿರಬಹುದು, ಬಿಜೆಪಿಯ ದಲಿತವಿರೋಧಿ ಮನಸ್ಥಿತಿ ಬದಲಾಗಿಲ್ಲ.
ಸಿಎಂ ಹಾಗೂ ಮುಜರಾಯಿ ಸಚಿವರು ದಲಿತರಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.