ಬೆಂಗಳೂರು : ಒಂದು ವೇಳೆ ಸರ್ವಜ್ಞ ಇದ್ದಿದ್ದರೇ ಡಿ.ಕೆ.ಶಿವಕುಮಾರ್ ಅವರ ಜ್ಞಾನ ನೋಡಿ ಆತ್ಮಹತ್ಯೆ ಮಾಡಿಕೊಳುತ್ತಿದ್ದನು ಎಂದು ಕೃಷಿ ಸಚಿವರಿಗೆ ಜ್ಞಾನ ಇಲ್ಲ ಎಂಬ ಡಿಕೆಶಿಗೆ ಬಿ.ಸಿ.ಪಾಟೀಲ್ ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಬಿ.ಸಿ ಪಾಟೀಲ್, ಡಿ.ಕೆ.ಶಿವಕುಮಾರ್ ತೆವಳಿಗೆ ಮಾತನಾಡುವುದನ್ನು ಬಿಡಲಿ. ಅವರೊಬ್ಬ ಸೀಸನಲ್ ರಾಜಕಾರಣಿ.
ನಿನ್ನೆ ಸದನದ ಒಳಗೆ ಬಿ.ಸಿ.ಪಾಟೀಲ್ ನನ್ನ ಆತ್ಮೀಯ ಸ್ನೇಹಿತ ಎಂದವರು ಸಂಜೆ ಹೊತ್ತಿಗೆ ತಮ್ಮ ಮಾತು ಬದಲಾಯಿಸಿದ್ದಾರೆ.
ಒಳಗೊಂದು, ಹೊರಗೊಂದು, ರೂಂನಲ್ಲೊಂದು ಮಾತನಾಡುವುದು ಶಿವಕುಮಾರ್ ಗೆ ಅಭ್ಯಾಸವಾಗಿದೆ ಎಂದು ಕಿಡಿಕಾರಿದರು.
ಇದೇ ವೇಳೆ ರೈತರ ಪ್ರತಿಭಟನೆ ಬಗ್ಗೆ ಮಾತನಾಡಿದ ಅವರು, ರೈತರು ಹೋರಾಟ ಮಾಡೋದ್ರಲ್ಲಿ ಅರ್ಥವಿಲ್ಲ.
ಎಪಿಎಂಸಿ ಕಾಯ್ದೆಯಿಂದ ಯಾವುದೇ ನಷ್ಟವಿಲ್ಲ. ರೈತರಿಗೆ ಒಳ್ಳೆಯದೇ ಆಗಲಿದೆ. ರೈತರು ಯಾವ ಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆಂಬುದು ಸ್ಪಷ್ಟವಾಗಬೇಕು.
ರೈತರು ತಮ್ಮ ಹೋರಾಟ ಕೈಬಿಡಬೇಕೆಂದು ಮನವಿ ಮಾಡಿದರು.








