ಮೇಕೆದಾಟು ಜಾರಿಗೆ ಕಾಂಗ್ರೆಸ್ ಪಾದಯಾತ್ರೆ | ಇದು ಪಕ್ಷಾತೀತ ಹೋರಾಟ ಎಂದ ಡಿಕೆಶಿ Congress saaksha tv
ಬೆಂಗಳೂರು : ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಡೆಯಲಿರುವ ಪಾದಯಾತ್ರೆಯ ಮುಂದಾಳತ್ವವನ್ನು ಕಾಂಗ್ರೆಸ್ ವಹಿಸಿಕೊಂಡಿದ್ದರೂ ಇದು ಪಕ್ಷಾತೀತ ಹೋರಾಟ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದು, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಜನವರಿ 9 ರಂದು ‘ಪಾದಯಾತ್ರೆ’ ಆರಂಭವಾಗಿ ಜನವರಿ 19ಕ್ಕೆ ಕೊನೆಗೊಳ್ಳಲಿದೆ. ಪಾದಯಾತ್ರೆಯ ಮುಂದಾಳತ್ವವನ್ನು ಕಾಂಗ್ರೆಸ್ ವಹಿಸಿಕೊಂಡಿದ್ದರೂ ಇದು ಪಕ್ಷಾತೀತ ಹೋರಾಟ. ಎಲ್ಲಾ ವರ್ಗ, ಸಮುದಾಯದ ಜನಪರ ಕಾಳಜಿಯುಳ್ಳ ಎಲ್ಲರೂ, ಎಲ್ಲ ಸಂಘ ಸಂಸ್ಥೆಗಳೂ ಈ ಹೋರಾಟದಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.
ಪಾದಯಾತ್ರೆಯು ಮೇಕೆದಾಟಿನಿಂದ ಆರಂಭವಾಗಿ ಬೆಂಗಳೂರು ನಗರಕ್ಕೆ ಆಗಮಿಸಲಿದೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ಹೋರಾಟ ಮಾಡಲೇ ಬೇಕಾಗಿದೆ. ಇದೊಂದು ಐತಿಹಾಸಿಕ ಹೋರಾಟ. ಪ್ರತಿಯೊಬ್ಬರೂ ಈ ಹತ್ತು ದಿನಗಳ ಹೋರಾಟಕ್ಕೆ ಕೈಜೋಡಿಸಿ ಇತಿಹಾಸದ ಭಾಗವಾಗುವಂತೆ ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಇನ್ನು ಜನವರಿ 9 ರಂದು ಮೇಕೆದಾಟುವಿನಿಂದ ಪಾದಯಾತ್ರೆ ಆರಂಭವಾಗಲಿದೆ, ಐದು ದಿನ ಗ್ರಾಮೀಣ ಭಾಗದಲ್ಲಿ ಹಾಗೂ ಐದು ದಿನ ನಗರ ಭಾಗದಲ್ಲಿ ಪಾದಯಾತ್ರೆ ನಡೆಯಲಿದೆ ಎಂದಿದ್ದಾರೆ.








