ಅಧಿಕಾರದ ಗದ್ದುಗೆ ಏರಲು ಕಸರತ್ತು ನಡೆಸಿರುವ ಕಾಂಗ್ರೆಸ್ ಗೆ ರಿವರ್ಸ್ ಆಪರೇಷನ್ ಭೀತಿ ಎದುರಾಗಿದೆ.
ಬಿ.ಸಿ. ಪಾಟೀಲ್ ಮಣಿಸಲು ಮಾಡಿದ್ದ ಕಾಂಗ್ರೆಸ್ ನ ಪ್ಲಾನ್ ಉಲ್ಟಾ ಆಗುತ್ತಿದೆ. ಹಿರೇಕೆರು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ್ ಗೆ ಈಗ ಬಿಜೆಪಿ ಗಾಳ ಹಾಕಿದೆ. ಕಾಂಗ್ರೆಸ್ ಟಿಕೆಟ್ ನ್ನು ಯು.ಬಿ. ಬಣಕಾರ್ ಗೆ ನೀಡಿದ್ದಕ್ಕೆ ಬನ್ನಿಕೋಡ್ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಬಿಜೆಪಿ ಅವರನ್ನು ತನ್ನತ್ತ ಸೆಳೆಯುತ್ತಿದೆ.
ಅಸಮಾಧಾನವನ್ನೇ ಬಂಡವಾಳ ಮಾಡಿಕೊಂಡಿರುವ ಬಿ.ಸಿ. ಪಾಟೀಲ್, ಖುದ್ದು ಬನ್ನಿಕೋಡ್ ಮನೆಗೆ ತೆರಳಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಸದ್ಯ ಬಿ.ಸಿ. ಪಾಟೀಲ್ ಹಾಗೂ ಬನ್ನಿಕೋಡ್ ಮಾತನಾಡಿರುವ ಭೇಟಿಯಾಗಿರುವ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಭಯ ಶುರುವಾದಂತಾಗಿದೆ.








