ಕಾಂಗ್ರೆಸ್ ನವರು ಸುಳ್ಳಿನ ಫ್ಯಾಕ್ಟರಿ ಇದ್ದಂತೆ : ಶ್ರೀರಾಮುಲು
ಗದಗ : ಕಾಂಗ್ರೆಸ್ ನವರು ಸುಳ್ಳಿನ ಫ್ಯಾಕ್ಟರಿ ಇದ್ದಂತೆ. ಅವರು ಸತ್ಯಕ್ಕೆ ದೂರವಾದದ್ದನ್ನು ಮಾತನಾಡುತ್ತಾರೆ ಎಂದು ಸಚಿವ ಬಿ.ಶ್ರೀರಾಮುಲು ಕಿಡಿಕಾರಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಪ್ರಕರಣದ ವಿರುದ್ಧ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನವರು ಸುಳ್ಳಿನ ಫ್ಯಾಕ್ಟರಿ ಇದ್ದಂತೆ. ಸತ್ಯಕ್ಕೆ ದೂರವಾದದ್ದನ್ನು ಮಾತನಾಡುತ್ತಾರೆ.
ಸಿದ್ದರಾಮಯ್ಯ ಅವರು ಹೊಸ ಟ್ರೆಂಡ್ ಆರಂಭಿಸಿದ್ದಾರೆ. ಅವರ ಬೂಟಾಟಿಕೆ ನೋಡುತ್ತಿದ್ದೇವೆ ಜನರಲ್ಲಿ ಗೊಂದಲ ಸೃಷ್ಟಿ ಮಾಡಲು ಮುಂದಾಗಿದ್ದಾರೆ ಎಂದು ರಾಮುಲು ದೂರಿದರು.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ರಾಮುಲು, ಸಿದ್ದರಾಮಯ್ಯನವರು ಬಿಟ್ ಕಾಯಿನ್ ಬಗ್ಗೆ ದಾಖಲೆ ಸಲ್ಲಿಸುವುದಾಗಿ ಮೊದಲು ಹೇಳಿದ್ದರು ಆದರೆ ಇದೀಗ ಆ ರೀತಿ ಹೇಳಿಲ್ಲ ಎನ್ನುತ್ತಿದ್ದಾರೆ.
ಅವರಲ್ಲೇ ಹೊಂದಾಣಿಕೆ ಇಲ್ಲ, ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ.
ಸಿದ್ದರಾಮಯ್ಯ, ಪರಮೇಶ್ವರ್, ಡಿಕೆಶಿ ಅಂತಾ ಮೂರು ಬಾಗಿಲು ಆಗಿದ್ದಾರೆ.
ಮೊದಲು ಅವರ ಮನೆಯನ್ನು ಸರಿ ಮಾಡಿಕೊಳ್ಳಲಿ ನಂತರ ನಮ್ಮ ಬಗ್ಗೆ ಮಾತನಾಡಲಿ ಎಂದು ಗುಡುಗಿದರು.