Congress : ಕೋಲಾರದಲ್ಲಿ ಗೆದ್ದೇ ಗೆಲ್ಲುತ್ತೇನೆ – ಸಿದ್ದರಾಮಯ್ಯ
ಮೈಸೂರು : ಕೋಲಾರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ವಿಧಾನಸಭಾ ಚುನಾವಣೆಗೆ ಕೋಲಾರದಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ನವರು ಪ್ರತಿಕ್ರಿಯೆ ನೀಡಿದ್ದಾರೆ..
ಬಾದಾಮಿಯಲ್ಲಿ ಬಿಜೆಪಿಯವರು ಪಟ್ಟಣಶೆಟ್ಟಿಯನ್ನು ಅಭ್ಯರ್ಥಿ ಮಾಡಬೇಕಿತ್ತು.
ಆದರೆ ಶ್ರೀರಾಮುಲು ನಿಲ್ಲಿಸಿದರು.
ಅಮಿತ್ ಷಾ ಬಂದು ರಾಮಲು ಕೈಹಿಡಿದುಕೊಂಡು ಪ್ರಚಾರ ಮಾಡಿದರು.
ನಾನು ಒಮ್ಮೆ ನಾಮಪತ್ರ ಹಾಕಲು, ಮತ್ತೊಮ್ಮೆ ವೋಟ್ ಕೇಳಲು ಎರಡು ಬಾರಿ ಮಾತ್ರ ಹೋಗಿದ್ದೆ.
ಬಾದಾಮಿ ಜನ ಗೆಲ್ಲಿಸಿದರು.
ಈಗಲೂ ಹೆಲಿಕಾಪ್ಟರ್ ಕೊಡಿಸುತ್ತೇವೆ ಸ್ಪರ್ಧೆ ಮಾಡಿ ಅಂತಿದ್ದಾರೆ.
ನನಗೂ ವಯಸ್ಸಾಯ್ತು.
ಬಾದಾಮಿ ದೂರ ಅಂತ ಕೋಲಾರ ಆಯ್ಕೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ.