ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದಾಗನಿಂದಲೂ ಸದಾ ರಾಜಕೀಯ ಚಟುವಟಿಕೆಗಳಲ್ಲಿ ಡಿಕೆಶಿ ಬ್ಯುಸಿ ಇದ್ದಾರೆ. ಪ್ರತಿದಿನ ಒಂದಲ್ಲಾ ಒಂದು ಜನಪರ ಕೆಲಸಗಳಲ್ಲಿ ತೊಡಗಿಸಿಕೊಮಡಿರುವ ಕನಕಪುರ ಬಂಡೆ ಬಿಜೆಪಿ ಸರ್ಕಾರದ ಲೋಪದೋಷಗಳ ವಿರುದ್ಧವೂ ವಾಗ್ದಾಳಿ ನಡೆಸಿಕೊಮಡು ಬಂದಿದ್ದಾರೆ. ರಾಜ್ಯದಲ್ಲಿ ಕೊರೊನಾ ಬಿಕ್ಕಟ್ಟು ದಿನೇ ದಿನೇ ಬಿಗಡಾಯಿಸುತ್ತಲೇ ಇದ್ದು, ಸ್ಥಳೀಯ ನಾಯಕರ ಜೊತೆಗೆ ಡಿಕೆಶಿ ಸಭೆಗಳನ್ನು ನಡೆಸಿ ಕೊರೊನಾ ನಿರ್ಮೂಲನೆಗೂ ಶ್ರಮಿಸುವಂತೆ ಸೂಚನೆ ನಿಡುತ್ತಿದ್ದಾರೆ. ಅದರಂತೆ ಇಂದು ಸಹ ಡಿಕೆಶಿ ಅವರು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಆರೋಗ್ಯ ಹಸ್ತ ಸಮಿತಿ ಸಭೆ ನಡೆಸಿದ್ದಾರೆ.. ಈ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಐಟಿ ವಿಭಾಗ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಮಾಜಿ ಸಂಸದರಾದ ಧ್ರುವನಾರಾಯಣ ಮತ್ತು ಬಿ.ಎನ್ ಚಂದ್ರಪ್ಪ, ಕೆಪಿಸಿಸಿ ಮಾಧ್ಯಮ ವಿಭಾಗ ಮುಖ್ಯಸ್ಥ ಬಿ.ಎಲ್ ಶಂಕರ್ ಮತ್ತು ಸಹ ಅಧ್ಯಕ್ಷರಾದ ಸುದರ್ಶನ್, ಶಾಸಕರಾದ ಅಜಯ್ ಸಿಂಗ್ ಮತ್ತಿತರರು ಇದ್ದರು.
ಹಬ್ಬದ ಸಮಯದಲ್ಲಿ ಕರಾಳ ಮುಖ ತೋರಿಸಿದ ಕಾಂಗ್ರೆಸ್, ಕಲೆಕ್ಷನ್ನಲ್ಲಿ ಫಸ್ಟ್, ಜನಸೇವೆಯಲ್ಲಿ ಲಾಸ್ಟ್
ಬೆಂಗಳೂರು, ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿಗಳಿಗಾಗಿ ಜನರಿಂದ ಸುಲಿಗೆ ಮಾಡುತ್ತಿದೆ. ಇದರ ವಿರುದ್ಧ ಇನ್ನೂ ಒಂದು ವಾರ ಪ್ರತಿಭಟಿಸಲಾಗುವುದು. ಹಾಗೆಯೇ ಅಧಿವೇಶನದಲ್ಲೂ ಪ್ರಶ್ನೆ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ...








